ಡಾ. ಪುಷ್ಪಾವತಿ ಶಲವಡಿಮಠ-ನೀ ಎಂದರೆ

ಕಾವ್ಯ ಸಂಗಾತಿ

ಡಾ. ಪುಷ್ಪಾವತಿ ಶಲವಡಿಮಠ

ನೀ ಎಂದರೆ

ನೀ ಎಂದರೆ ಹೀಗೇನೆ
ಶೀತಲ ಅತೀ ಶೀತಲ
ಹಿಡಿಯ ಹೋದರೆ
ಕರಗಿ ಹೋಗುವ ಮಂಜಿನಂತೆ
ಅನುಭವಕ್ಕೆ ಮಾತ್ರ ಸೀಮಿತ

ನೀ ಎಂದರೆ ಹೀಗೆನೇ
ಸುಂದರ ಅತೀ ಸುಂದರ
ಹಿಡಿಯ ಹೋದರೆ
ಕೈಗೆ ಎಟುಕದ ಬಾನ ಚಂದಿರ
ನೋಡಲಷ್ಟೆ ಸುಂದರ

ನೀ ಎಂದರೆ ಹೀಗೆನೇ
ನೊರೆ ಹಾಲೊಳಗಿನ ತುಪ್ಪ
ಹೂವಿನೊಳಗಿನ ಮಕರಂದ
ಕೋಗಿಲೆಯೊಳಗಿನ ಗಾನ
ಎನ್ನಳೊಗಿನ ಪ್ರೇಮ ಮೃದಂಗ……….


ಡಾ. ಪುಷ್ಪಾವತಿ ಶಲವಡಿಮಠ

One thought on “ಡಾ. ಪುಷ್ಪಾವತಿ ಶಲವಡಿಮಠ-ನೀ ಎಂದರೆ

Leave a Reply

Back To Top