ಪರಿಮಳ ಐವರ್ನಾಡು  ಕವಿತೆ-ಕನಸು

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು 

ಕನಸು

ನಿದಿರೆಯ ಮಂಪರಿನಲಿ
ಅರೆಗಣ್ಣ ಮುಚ್ಚುತಲಿ
ನಟ್ಟ ನಡು ರಾತ್ರಿಯಲಿ
ಕಂಡೆ ನಾ ಕನಸೊಂದ

ಬೃಂದಾವನದಿ ಅರಳಿಹವು
ವಿಧ ವಿಧ ಹೂವುಗಳು
ಹಸಿರ ಸಿರಿಯಲಿ ಹೊಳೆವ
ಗಿಡ ಮರ ಬಳ್ಳಿಗಳು

ಚಿಂವ್ ಚಿಂವ್ ಪಕ್ಷಿ ಸಂಕುಲ
ಚಂಗನೆ ಜಿಗಿವ ಚಿಗರೆಯ ಸಾಲು
ಬಣ್ಣ ಬಣ್ಣದ ಚಿಟ್ಟೆಯ ಕಲರವ
ಮಧುವನು ಹೀರುವ ದುಂಬಿಯು

ನೀಲ ಜೋಕಾಲಿ ನೇತಾಡುತಿರೆ
ವಯ್ಯಾರದಲಿ ನಾ ಜೀಕುತಿರೆ
ಮಿಂಚಂತೆ ಸುಳಿದಾಡಿದ ನನ್ನವನು
ಸಿಹಿ ಮುತ್ತ ನೀಡಿದ ನಲ್ಲನವನು

ಮುದ ನೀಡುವ ಮಾತುಗಳು
ಅವನ ಮಡಿಲಲಿ ಪವಡಿಸಲು
ಬರಸಿಡಿಲು ಆರ್ಭಟಿಸುತ್ತಿರಲು
ಮುಕ್ತವಾಯಿತು ಸ್ವಪ್ನದ ಹೊನಲು


ಪರಿಮಳ ಐವರ್ನಾಡು

Leave a Reply

Back To Top