ಕಾವ್ಯ ಸಂಗಾತಿ
ಅಮರೇಶ.ಗೊರಚಿಕನವರ-
ಗಾಂಧಿ ನೀವಿಲ್ಲದ ಮೇಲೆಅಮರೇಶ.
ನಮ್ಮವರು ನಿಮ್ಮದೇ ಸ್ಮರಣೆಯಲ್ಲಿದ್ದಾರೆ
ಆದರ್ಶ, ತತ್ವಗಳನ್ನು ಪಾಲಿಸುವುದರಲಲ್ಲ
ನಗು ಮುಖದ ನಿಮ್ಮನ್ನು ನಿತ್ಯ ನೋಡಿ,ನೋಟು ಎಣಿಸುವದರಲ್ಲಿ
ಕಛೇರಿ,ಸೌಧಗಳಲ್ಲಿ ಗೋಡೆಗೆ
ತೂಗು ಹಾಕಿದೆ ನಿಮ್ಮ ಭಾವಚಿತ್ರ
ನೊಂದವರ ಕಣ್ಣೀರು ಒರೆಸುವದರ ಪ್ರತೀಕವಾಗಲ್ಲ
ಬಡವರ ನೋವಿನುಸಿರ ಬಸಿದು ಕುಡಿಯಲು
ಗಾಂಧೀ ನೀವಿಲ್ಲದೆ ಮೇಲೆ ಶಾಂತಿ,ಅಹಿಂಸೆ ಮರೆಮಾಚಿದೆ
ರಾಮರಾಜ್ಯದ ಕನಸು ಕನಸಾಗಿಯೇ ಉಳಿದಿದೆ
ಅಮರೇಶ.ಗೊರಚಿಕನವರ