ಇಮಾಮ್ ಮದ್ಗಾರ-ಮನ ಮೈಲಿಗೆ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಮನ ಮೈಲಿಗೆ

ಎದೆಯ ತಿತ್ತಿಯಲಿ
ಎರಿಳಿತದ ಎದೆಯುಸಿರು !
ಹೃದಯದ ಬಡಿತದಲಿ
ಅದ್ಯಾವುದೋ ಹೊಸರಾಗ

ಕೆಂದುಟಿಯ ತಿರುಳಿನ
ಮಧು ಮೆಲ್ಲಗೆ…
ಕರಗಿ ಜಿನುಗಿದಂತ
ಭಾಸ !!

ಮೈಯೆಲ್ಲಾ ಹೆಣಭಾರ
ಕಾಲುಗಳ
ನರ ನರ ಗಳಲಿ
ಜೋಮೇಕೋ !!!

ಮನ ಮೈಲಿಗೆ
ಮನಸು ಮಲ್ಲಿಗೆ
ಹೃದಯದ
ಹವಾಮಾನ ದಲ್ಲಿ
ಬದಲಾವಣೆ !

ನಾಕಕ್ಕೆ ನಾಲ್ಕೇ
ಗೇಣು !!!

ಇದೇನಾ ಪ್ರೇಮ
ಇದೇನಾ ಪ್ರೀತಿ ??


ಇಮಾಮ್ ಮದ್ಗಾರ

Leave a Reply

Back To Top