“ಐಕ್ಯಗಾನ” ಮಕ್ಕಳ ಪದ್ಯ-ಪರಿಮಳ ಐವರ್ನಾಡು ಸುಳ್ಯ

ಮಕ್ಕಳ ವಿಭಾಗ

“ಐಕ್ಯಗಾನ” ಮಕ್ಕಳ ಪದ್ಯ-

ಪರಿಮಳ ಐವರ್ನಾಡು ಸುಳ್ಯ

ಸಮರಸ ಗಾನ ಪಾಡಿರಿ
ಭಾವೈಕ್ಯತೆ ಭಾವನೆ ಹರಿಸಿರಿ

ಹಲವು ಭಾಷೆಗಳು ಹಲವು ಪಂಥಗಳು
ಭಾರತದ ಮಣ್ಣಲಿ
ಎಲ್ಲರೊಂದೇ ಎಂಬ ಭಾವವು
ಹೃದಯದೊಳು ಉದಿಸಲಿ

ಜಾತಿ ಗೀತಿ ಎಷ್ಟಿರಲಿ ಮತ ಧರ್ಮವು ಹಲವಿರಲಿ
ಮನುಜ ಮತವೇ ಶ್ರೇಷ್ಠ ಎನ್ನಲಿ
ನಾನು ಬೇರೆ ನೀನು ಬೇರೆ ಎಂಬ ಬೇಧ ತೊರೆದು
ಹರಿವ ನೆತ್ತರೊಂದೇ ಎಂದರಿಯಲಿ

ಪರಹಿತವ ಬಯಸುತ ಸದ್ಭಾವನೆಯ ಮೆರೆಸುತ
ಮಾನವೀಯತೆ ಬೆಳಗಲಿ
ನಮ್ಮ ದೇಶ ನಮ್ಮ ಜನರೇ ನಮ್ಮ ಪ್ರಾಣವಾಗಲಿ
ಪರದೇಶದ ಬಂಧುಗಳು ನಮ್ಮ ಮಿತ್ರರಾಗಲಿ

ಮೇಲು ಕೀಳಂಬ ಕಚ್ಚಾಟ ತೊರೆಯುತ
ಸಹಬಾಳ್ವೆ ಪಯಣ ಸಾಗಲಿ
ವೇಷ ಭೂಷಣ ಬೇರೆಯಾದರೂ
ಐಕ್ಯಗಾನ ಮೊಳಗಲಿ

ಭಾರತಾಂಬೆಯ ಪಾದ ಪೂಜಿಸಿ
ತಾಯಿ ಭಾರತಿಯ ಸೇವೆಗಯ್ಯೋಣ
ಒಂದೇ ತಾಯ ಮಕ್ಕಳೆಂಬ ಮಂತ್ರವನ್ನೇ
ಪಠಿಸುತ ಬಾಳೋಣ


ಪರಿಮಳ ಐವರ್ನಾಡು ಸುಳ್ಯ

Leave a Reply

Back To Top