ಶಿಶುಗೀತೆ,ಅಕ್ಷರದ ಅಕ್ಕರೆ ಅನುರಾಧಾ ರಾಜೀವ್

ಮಕ್ಕಳ ವಿಭಾಗ

ಅಕ್ಷರದ ಅಕ್ಕರೆ

ಅನುರಾಧಾ ರಾಜೀವ್

ಮುದ್ದಿನ ಕಂದನು ಪುಸ್ತಕ ಬಿಡಿಸುತ
ಕೈಯಲಿ ಬಳಪವ ಹಿಡಿದಿಹನು
ಸದ್ದನು ಮಾಡದೆ ಅಕ್ಷರ ಬರೆಯುತ
ತಾನೇ ತನ್ಮಯ ಆಗಿಹನು.

ಪುಟ್ಟ ಮನದಲಿ ಕಲಿಕೆಯ ಬಯಕೆ
ಎದೆಯಲಿ ಮೂಡಿ ನಿಂತಿದೆ.
ಬಿಟ್ಟ ಕಂಗಳಲಿ ಆಸೆಯನು ಅರಳಿಸಿ
ದಿಟ್ಟ ನೋಟವ ನೆಟ್ಟಿದೆ

ಕಾವ್ಯವ ಬರೆದು ಸಾಹಿತ್ಯ ಲೋಕಕೆ
ಹೆಮ್ಮೆಯ ಗರಿಯ ನೀಡುವೆಯಾ
ಭವ್ಯ ಭಾರತದ ಧೀರ ಪ್ರಜೆಯಾಗಿ
ದೇಶಕೆ ಹೆಸರ ತರುವೆಯಾ

ನೆಲದಲಿ ಕುಳಿತು ಕಾಲನು ಬಿಡಿಸಿ
ಬರೆಯುವ ಚೆಂದವ ನೋಡೋಣ
ನಲಿದಿದೆ ಹೃದಯ ಪ್ರೀತಿಯ ಕಂದನ
ಬರಹದ ಶೈಲಿಗೆ ಹಾಡೋಣ


ಅನುರಾಧಾ ರಾಜೀವ್

Leave a Reply

Back To Top