ಕಾವ್ಯ ಸಂಗಾತಿ
ಡಾ.ರಾಜಶೇಖರ್ ನಾಗೂರ ಕವಿತೆ
ತೋಳುಗಳ ನಡುವೆ
ನಾಲ್ಕು ತೋಳುಗಳು
ಸೇರುವ ಮೊದಲು
ನಿನ್ನದೊಂದು ಪ್ರಪಂಚ
ನನ್ನದೊಂದು ಪ್ರಪಂಚ
ಸೇರಿದಮೇಲೆ ನಾಲ್ಕು
ತೋಳುಗಳ ನಡುವೆ
ಮಿಡಿಯುವ ಎರಡೂ
ಹೃದಯಗಳ ಪ್ರಪಂಚವೊಂದೇ
ದ್ವೈತದಿಂದ ಅದ್ವೈತಕ್ಕೆ
ಸಾಗುವ ನಮ್ಮೂಲವು
ಸಮಾಜದ ಸಮನ್ವಯತೆಗೆ
ಮಾದರಿಅಲ್ಲವೆ ಪ್ರಿಯೇ
ಡಾ.ರಾಜಶೇಖರ್ ನಾಗೂರ
Nice