ಭಾರತಿ ಅಶೋಕ್ ಕವಿತೆ-ಆತ್ಮದ ಹಸಿವಿದು…

ಕಾವ್ಯ ಸಂಗಾತಿ

ಆತ್ಮದ ಹಸಿವಿದು…

ಭಾರತಿ ಅಶೋಕ್

ಭಾವಗಳ ಒರತೆ
ಬತ್ತುವ ಮೊದಲು
ನೀನೊಮ್ಮೆ ಇಣುಕಿಬಿಡು
ಆಗಲಾದರೂ ಹಸಿ
ಪಸರುವುದು ನಿನ್ನ
ಅಮೃತ ದೃಷ್ಠಿಗೆ

ನೀನೊಮ್ಮೆ ಮೈದಡವಿ
ನೋಡು
ಜೀವ ಬಿಡುತಿಹ
ಪಸಿರಿಗೆ ಜೀವ ಬರುವುದು
ಸ್ಪರ್ಶದ ಮಾಧುರ್ಯಕೆ

ಒಮ್ಮೆ
ಗಾಢಾಲಂಗಿಸಿ ಬಿಡು
ಸಾವಿರ ವರುಷ ಬದುಕುವ
ಉತ್ಸಾಹ
ಆತ್ಮಾಲಿಂಗನದ ಪರಿ

ಒಂದೊಮ್ಮೆ ಜೊತೆಗಿದ್ದು
ನೋಡು
ಕೋಟಿ ಭವಗಳ
ಬಂಧನದ ಮುಕ್ತಿ
ನಿನ್ನ ಸಹಚಾರದಲಿ

ನಿನೋಮ್ಮೆ ನಾನಾಗಿ
ಬಿಡು
ಬಂಧನಗಳ ಆನಂದದಿ
ತೊರೆವೆ
ಲೀನವಾಗಿ ಬಿಡುವೆ
ನಿನ್ನೊಳೊಂದಾಗುವ
ಗುರಿ ಬಂಧುವೆ


ಭಾರತಿ ಅಶೋಕ್

Leave a Reply

Back To Top