ಕಾವ್ಯ ಸಂಗಾತಿ
ನಾದ ಹೊಮ್ಮಿಸು
ಇಮಾಮ್ ಮದ್ಗಾರ
ಹೃದಯ ವೀಣೆ
ಮೀಟಿ ಪ್ರೇಮದ
ನಾದ ಹೊಮ್ಮಿಸು
ಗೆಳೆಯಾ !!
ಪ್ರೀತಿಯ ರಾಗ
ಹೊಮ್ಮಿದಾಗ
ಪದ ಪುಷ್ಪವ ಅರ್ಚಿಸಿ
ನಾನು ನರ್ತಿಸುತ್ತೇನೆ
ಗೆಳೆಯಾ !!
ಶೈಶವ ..
ಗೆಜ್ಜೆ ಕಟ್ಟಿಕೊಂಡು
ಹೆಜ್ಜೆಯಿಟ್ಟಾಗಿದೆ
ಬದುಕಿ ನಂಗಳಕೆ !
ಬದುಕಿನ
ಬೇಗೇಗೆ
ಬಸವಳಿದ
ಬಾಳಿಗೆ
ಕಸುವು ತರಲಾದರೂ..
ನುಡಿಸು ಬಿಡು
ಅಮರ ರಾಗ
ನನ್ನೆದೆಯ ವೀಣೇ
ಮೀಟಿ !!!