ಕಾವ್ಯ ಸಂಗಾತಿ
ಜಾನ್ ಪದ್ಯಗಳು
ಮಾಜಾನ್ ಮಸ್ಕಿ
ಎಲ್ಲಾರು ಒಂದು ದಿನ ಸಾಯುವರೇ
ಜಾನ್!!
ಬದುಕಿದ್ದ ದಿನಗಳಲ್ಲಿ ಅರಿತು ಬಾಳು
ಕೊಂಚವು ಉಳಿಸದೇ ಹಂಚಿ ಬಿಡು ಪ್ರೀತಿಯನ್ನು
ಜಾನ್!!
ಅದೆಂದು ಬರಿದಾಗದ ಪುಷ್ಪಕ ಹೃದಯ ಯಾನ
ಲಕ್ಷ್ಮೀ ಚಂಚಲೆ ಅಂತಾರೆ ಅಲ್ವಾ
ಜಾನ್!!
ಹಾಗೆಯೇ ಪ್ರೀತಿಯು ಒಬ್ಬರಲ್ಲಿಯೇ ನಿಲ್ಲುವುದಿಲ್ಲ
ಕಣ್ಣೀರು ಬದುಕಿಗೆ ಸವಿ ಉಣಬಡಿಸುತ್ತದೆ
ಜಾನ್!!
ಉಪ್ಪು ಊಟಕ್ಕೆ ರುಚಿ ಕೊಟ್ಟಂತೆ.