ಕಾವ್ಯ ಸಂಗಾತಿ
ಪ್ರಿಯ ಸಖ
ಪರಿಮಳ ಐವರ್ನಾಡು ಸುಳ್ಯ
ಅನಿರೀಕ್ಷಿತವಾಗಿ ಬಂದ
ಅಪರೂಪದ ಅದ್ಭುತ
ಅಂತರಂಗದಿ ನೆಲೆಸಿದ
ಅಳಿಸಲಾಗದ ವಿಸ್ಮಿತ
ಜನುಮ ಜನುಮದ ಬಂಧ
ನಮ್ಮೀ ಸ್ನೇಹಾನುಬಂಧ
ನಿಲ್ಲದೆ ಹರಿಯಲಿ ಪವಿತ್ರ ಬಂಧ
ಬತ್ತದಿರಲಿ ನಮ್ಮ ಅನುಬಂಧ
ತೊರೆಯದಿರು ಪ್ರಿಯಸಖ
ನನ್ನ ಪ್ರೀತಿಯ ಜೀವಸಖ
ಕೊನೆಯುಸಿರಲೂ ಸ್ಮರಿಸುವೆ
ನಿನ್ನ ನಾಮಸುಧೆಯ ಜಪಿಸುವೆ