ಶಿವಪ್ರಸಾದ ಕೊಕ್ಕಡ-ಪ್ರೀತಿಯ ಅಪ್ಪ

ಶಿವಪ್ರಸಾದ ಕೊಕ್ಕಡ-ಪ್ರೀತಿಯ ಅಪ್ಪ

ಅಪ್ಪಾ ಅಪ್ಪಾ ನನ್ನಪ್ಪ
ಪ್ರೀತಿಯ ಸಾಗರ ನೀನಪ್ಪ
ವಿದ್ಯಾ ಬುದ್ಧಿಯ ಧಾರೆಯ ಎರೆದು
ಜೀವನ ಪಾಠವ ಕಲಿಸಿದೆಯಪ್ಪ.

ಕುಟುಂಬ ಜವಾಬ್ದಾರಿ ಹೊತ್ತಿಹ ನೀನು
ಮಾಡಲಿಲ್ಲ ನಮಗೆ ಯಾವುದರಲ್ಲೂ ಕೊರತೆಯನ್ನು
ಸಂತಸದ ತೊಟ್ಟಿಲಲ್ಲಿಟ್ಟು ತೂಗಿದೆ ನಮ್ಮನ್ನು
ಅಪ್ಪ ನೀನೇ ಸರ್ವಸ್ವ ನನ್ನ ಬಾಳಿಗಿನ್ನು

ಮಕ್ಕಳೇ ಆಸ್ತಿ ಎನ್ನುವ ನೀನು
ಮಾಡಿಲ್ಲ ನಿನ್ನ ಸ್ವಂತಕ್ಕೆ ಏನನ್ನು
ಮಡದಿ ಮಕ್ಕಳ ಸುಖದಲ್ಲಿ ಕಂಡೆ
ನಿನ್ನ ಜೀವನದ ಮಹದಾನಂದವನ್ನು

ಮಕ್ಕಳು ನಾವಿಗ ಸಬಲರಾಗಿಹೆವು
ನಿನ್ನಯ ಸೇವೆ ನಾವು ಮಾಡುವೆವು
ಜೀವನ ಹೀಗೆ ಸಂತಸದಿಂದಿರಲು
ನಮ್ಮ ಮನೆಯೇ ನಮಗೆ ಆನಂದ ತೊಟ್ಟಿಲು.


Leave a Reply

Back To Top