ಮಕ್ಕಳ ಸಂಗಾತಿ
ಪ್ರಜ್ವಲಾ ಶೆಣೈ
ಶಾಲೆಗೆ ಹೋಗೋಣ ಬಾರಾ
ಸಂಭ್ರಮದಿಂದ ಸಮವಸ್ತ್ರ ಧರಿಸಿ
ಸಂತಸದಿಂದ ಹೆಜ್ಜೆಯನಿರಿಸಿ
ಹೆಗಲಿಗೆ ಪುಸ್ತಕ ಚೀಲವ ಏರಿಸಿ
ಶಾಲೆಗೆ ಹೋಗೋಣ ಬಾರಾ
ನಾವ್ ಚಂದದಿ ನಲಿಯೋಣ ಬಾರಾ….
ಅಕ್ಷರ ಕಲಿಸಿದ ಗುರುವಿಗೆ ನಮಿಸಿ
ಶಾರದಾ ದೇವಿಯ ನಿತ್ಯವೂ ಭಜಿಸಿ
ಅಕ್ಕರೆಯಿಂದ ವಿನಯವ ಗಳಿಸಿ
ಶಾಲೆಗೆ ಹೋಗೋಣ ಬಾರಾ
ನಾವ್ ಅಂದದಿ ಬರೆಯೋಣ ಬಾರಾ…..
ತಾಯಿ ತಂದೆಯರ ಆಸೆಯ ಸ್ಮರಿಸಿ
ಜೀವನ ಅನುಭವ ಪಾಠವ ಕಲಿಸಿ
ಸರ್ಕಾರಿ ಕನ್ನಡ ಶಾಲೆಯ ಉಳಿಸಿ
ಶಾಲೆಗೆ ಹೋಗೋಣ ಬಾರಾ
ನಾವ್ ಆನಂದದಿ ಬೆಳೆಯೋಣ ಬಾರಾ…
ಪ್ರಜ್ವಲಾ ಶೆಣೈ
Very nice! after a long summer vacation!