ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್

ನಿನ್ನ ಕಂಗಳಲ್ಲಿಯ ಭಾವ ಏನೆಂದು ಬಣ್ಣಿಸಲಿ ಸಖಾ
ಕದ್ದು ಮುಚ್ಚಿ ನೋಡುವ ನೋಟವನೆಂತು ತಿಳಿಸಲಿ ಸಖಾ

ನಭದ ನಕ್ಷತ್ರಗಳೆಲ್ಲ ನಿನ್ನ ಕಣ್ಣುಗಳಂತೆ ಮೀಟುತಿವೆ
ಆ ಹೊಳಪಿನ ನಗುವನ್ನು ಹೇಗೆಂದು ವರ್ಣಿಸಲಿ ಸಖಾ

ಉಸಿರು ಉಸಿರಿನಲ್ಲೂ ನಿನ್ನನ್ನು ಸೆರೆ ಹಿಡಿದಿಡುವ ಆಸೆ
ಪ್ರೀತಿಯ ಪರಿಯ ಹೇಗೆಂದು ಧೇನಿಸಲಿ ಸಖಾ

ನಿನ್ನ ಮಾತಿನ ಪದಬಂಧಗಳೆ ಬಲು ರೋಚಕ
ಮೌನದ ಭಾಷೆಯನು ಹೇಗೆ ಅರ್ಥೈಸಲಿ ಸಖಾ

ನಿರ್ಲಿಪ್ತ ಭಾವದ ಪ್ರೇಮವ ಮನ ಹೊಕ್ಕು ನೋಡಲೇ
“ಮಾಜಾ” ಮಾಂತ್ರಿಕ ಮೋಡಿ ಹೇಗೆ ಚಿತ್ರಿಸಲಿ ಸಖಾ


ಮಾಜಾನ್ ಮಸ್ಕಿ

One thought on “ಮಾಜಾನ್ ಮಸ್ಕಿ ಅವರ ಗಜಲ್

  1. ಸಖನ ಕುರಿತಾದ ಭಾವನಾತ್ಮಕ ಗಜಲ್… ಸಖನನ್ನು ಧೇನಿಸುವ ರೀತಿ ಆಪ್ತವಾಗಿದೆ

Leave a Reply

Back To Top