ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಕ್ಕಮಹಾದೇವಿ ಜಯಂತಿ ವಿಶೇಷ

ಡಾ. ರೇಣುಕಾತಾಯಿ. ಸಂತಬಾ.

ಜಗದ ಜ್ಯೋತಿ

[10:45 pm, 05/04/2023] REMASAM: ಜಗದ ಜ್ಯೋತಿ*
ದಂಡಿ ಕತ್ತದೆ ಮಾಡಿಕೊಂಡಿಯಲ್ಲ
ಕೊರಳಿಗೆ ತಾಳಿಯನು ಕಟ್ಟಿಕೊಳ್ಳಲಿಲ್ಲ
ಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲ
ಮದುವೆಯ ಹಂದರವು ಹರಿವಿರಲಿಲ್ಲ
ಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ

ಸಮಾನತೆಗಾಗಿ ಧರಣಿ ಹೂಡದೆ
ಹೆಣ್ಣೆಂದು ಅವಕಾಶವಾದಿಯಾಗದೆ
ಅಲ್ಲಮರ ಮಂಟಪದ ಜ್ಯೋತಿಯಾದೆ
ಉಡುತಡಿ ಉಡುಗೊರೆಯಾಗಿ ಉದಯಿಸಿದೆ
ಕದಳಿಗೆ ಕರ್ಪೂರದಂತೆ ಅರ್ಪಿತಳಾದೆ

ನೀ ಶರಣ ಚಳುವಳಿಯ ಚೇತನಳು
ಅಲ್ಲಮರ ಸಮ ಸಂವೇದನಶೀಲಳು
ಅನುಭಾವಿಯುಕ್ತ ಮೇರುಸಾಹಿತಿ
ವಿಶಿಷ್ಟ ಮೌಲಿಕ ವಚನಗಾರ್ತಿ
ಬಂಡಾಯ ಕವಯತ್ರಿ ಕನ್ನಡಕೆ ಪ್ರಥಮಳು

ಸಾರಿದೆ ಜಗದ ಕಣ್ಣು ಬೆತ್ತಲೆಂದು
ಮನವು ಚಂಚಲದಿ ಬೆತ್ತಲೆಯೆಂದೆ
ಇಷ್ಟ ಕಾಮ್ಯಗಳಡಿ ಸಿಲುಕಿದೆಯೆಂದೆ
ಭೌತಿಕ ಭೋಗದಲಿದೆಯೆಂದೆ
ಜಗದ ಬೆತ್ತಲ ನೀ ಸ್ವತಃ ತೋರಿದೆ

ಭೋಗ ಜೀವನದ ಬಲಿದಾನ
ಕರ್ಮಠ ಯೋಗಿಣಿಯಂತೆ ಸಾಧನ
ಯೋಗಾಂಗ ತ್ರಿವಿಧಿಯ ಅನುಷ್ಠಾನ
ಅಲ್ಲಮರಿಂದ ಧೀರ ತಾಯಿಯ ನಮನ
ಅಕ್ಕ ನೀ ವೈರಾಗ್ಯ ನಿಧಿ ಜ್ಞಾನ ವಿರತಿ ಘನ

ಚನ್ನ ಮಲ್ಲಿಕಾರ್ಜುನ ಒಬ್ಬನೇ ಪುರುಷನೆಂದವಳು
ಮಿಕ್ಕವರೆಲ್ಲ ಸ್ತ್ರೀ ಸಮಾನರೆಂದವಳು
ಕೇಶಾಂಬರವು ಜಗದ ಜನರಿಗೆಂದವಳು
ಗಟ್ಟಿಗಿತ್ತಿ ಸಾಧ್ವಿ ಅಕ್ಕಮ್ಮ ಮಹಾದೇವಿಯಾದಳು
ಅಕ್ಕ ವಿಶ್ವ ಸ್ತ್ರೀ ಕುಲದ ಜ್ಯೋತಿಯಾಗಿಹಳು.

ಡಾ. ರೇಣುಕಾತಾಯಿ. ಸಂತಬಾ.ರೇಮಾಸಂ
[10:45 pm, 05/04/2023] REMASAM: ಜಗದ ಜ್ಯೋತಿ
ದಂಡಿ ಕತ್ತದೆ ಮಾಡಿಕೊಂಡಿಯಲ್ಲ
ಕೊರಳಿಗೆ ತಾಳಿಯನು ಕಟ್ಟಿಕೊಳ್ಳಲಿಲ್ಲ
ಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲ
ಮದುವೆಯ ಹಂದರವು ಹರಿವಿರಲಿಲ್ಲ
ಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ

ಸಮಾನತೆಗಾಗಿ ಧರಣಿ ಹೂಡದೆ
ಹೆಣ್ಣೆಂದು ಅವಕಾಶವಾದಿಯಾಗದೆ
ಅಲ್ಲಮರ ಮಂಟಪದ ಜ್ಯೋತಿಯಾದೆ
ಉಡುತಡಿ ಉಡುಗೊರೆಯಾಗಿ ಉದಯಿಸಿದೆ
ಕದಳಿಗೆ ಕರ್ಪೂರದಂತೆ ಅರ್ಪಿತಳಾದೆ

ನೀ ಶರಣ ಚಳುವಳಿಯ ಚೇತನಳು
ಅಲ್ಲಮರ ಸಮ ಸಂವೇದನಶೀಲಳು
ಅನುಭಾವಿಯುಕ್ತ ಮೇರುಸಾಹಿತಿ
ವಿಶಿಷ್ಟ ಮೌಲಿಕ ವಚನಗಾರ್ತಿ
ಬಂಡಾಯ ಕವಯತ್ರಿ ಕನ್ನಡಕೆ ಪ್ರಥಮಳು

ಸಾರಿದೆ ಜಗದ ಕಣ್ಣು ಬೆತ್ತಲೆಂದು
ಮನವು ಚಂಚಲದಿ ಬೆತ್ತಲೆಯೆಂದೆ
ಇಷ್ಟ ಕಾಮ್ಯಗಳಡಿ ಸಿಲುಕಿದೆಯೆಂದೆ
ಭೌತಿಕ ಭೋಗದಲಿದೆಯೆಂದೆ
ಜಗದ ಬೆತ್ತಲ ನೀ ಸ್ವತಃ ತೋರಿದೆ

ಭೋಗ ಜೀವನದ ಬಲಿದಾನ
ಕರ್ಮಠ ಯೋಗಿಣಿಯಂತೆ ಸಾಧನ
ಯೋಗಾಂಗ ತ್ರಿವಿಧಿಯ ಅನುಷ್ಠಾನ
ಅಲ್ಲಮರಿಂದ ಧೀರ ತಾಯಿಯ ನಮನ
ಅಕ್ಕ ನೀ ವೈರಾಗ್ಯ ನಿಧಿ ಜ್ಞಾನ ವಿರತಿ ಘನ

ಚನ್ನ ಮಲ್ಲಿಕಾರ್ಜುನ ಒಬ್ಬನೇ ಪುರುಷನೆಂದವಳು
ಮಿಕ್ಕವರೆಲ್ಲ ಸ್ತ್ರೀ ಸಮಾನರೆಂದವಳು
ಕೇಶಾಂಬರವು ಜಗದ ಜನರಿಗೆಂದವಳು
ಗಟ್ಟಿಗಿತ್ತಿ ಸಾಧ್ವಿ ಅಕ್ಕಮ್ಮ ಮಹಾದೇವಿಯಾದಳು


About The Author

Leave a Reply

You cannot copy content of this page

Scroll to Top