ಕಾವ್ಯ ಸಂಗಾತಿ
ಹಾಯ್ಕುಗಳು
ರೋಹಿಣಿ ಯಾದವಾಡ
೧)
ಪ್ರೀತಿಸಲೇನು
ಪ್ರೇಮಧಾರೆ ಎರೆದು !
ಸಿಹಿ ಜೇನಂತೆ.
೨)
ಕಡಲಾಳದ
ಮುತ್ತು ರತ್ನದಂತೆನ್ನ !
ಒಲವ ಪ್ರೀತಿ.
೪)
ಹರಿಸಲೇನು
ಮುತ್ತಿನ ಸುರಿಮಳೆ !
ನೆನೆಯುವಷ್ಟು .
೫)
ನಮ್ಮೀ ಪ್ರೀತಿಗೆ
ಸಾಕ್ಷಿಗಿದೆ ನೋಡಲ್ಲಿ !
ಜೇನುಗೂಡಂತೆ.
೬)
ಪ್ರೀತಿಯ ಗಾಳಿ
ಸೂಸಿತು ಹೃದಯಕೆ !
ಅನುರಾಗದಿ.
೭)
ಕರಗಿ ಹೋದೆ
ನಿನ್ನ ಆಲಿಂಗನಕೆ !
ಮರೆತು ಎಲ್ಲ.
೮)
ಸುಖಿಸು ಎಂದೆ
ಪ್ರೀತಿಯ ಧಾರೆಯಲಿ !
ನೋವ ಮರೆತು.
೯)
ಗೆಲುವೆನೆಂದೆ
ನಿನ್ನ ಭರವಸೆಗೆ !
ವಿಶ್ವಾಸವಿಟ್ಟು.
೧೦)
ಕಣ್ಣಂಚಿನಲಿ
ಜಿನಗುವ ಹೊಳಪು !
ಪ್ರೀತಿಗೆ ಸಾಕ್ಷಿ.