ಕಾವ್ಯ ಸಂಗಾತಿ
ಜಾನ್ ಪದ್ಯಗಳು
ಮಾಜಾನ್
ಒಂದು ಮುತ್ತನಿಟ್ಟು ಅದೆಷ್ಟು ನೋವು ಕೊಟ್ಟೆ
ಜಾನ್!!
ಬೆಂಕಿಯಲ್ಲಿ ಸುಟ್ಟು ಬೂದಿಯಾಗದೆ ಅರಳಿ ಹೂವಾದೆ
ಪ್ರಪಂಚ ಒಪ್ಪದ ಅಪ್ಪಿನ ನಂಟಿಕೆ ಬೆಳೆಸಲೇ
ಜಾನ್!!
ನೆರಳು ಕೊಡದ ಜಾಲಿಮರದ ಆಸರೆ ಬಯಸಲೇ??
ತೋರಿಕೆ ಪ್ರೀತಿಯಲ್ಲಿ ಏನಿದೆ ಹಸಿರು
ಜಾನ್??
ಹೃದಯದ ಬೇರಲ್ಲಿ ನೀರೇ ಇಲ್ಲದ ಮೇಲೆ…
ಬೇಯಿಸಲು ಬೆಂಕಿ ಇರಬೇಕು ಹಸಿದ ಹೊಟ್ಟೆ ತುಂಬಲು
ಜಾನ್!!
ಹೊಟ್ಟೆಯನ್ನೇ ದಹಿಸುವಂತೆ ಇರಬಾರದು
Bohath khoob mdm
Ni
Nice poems