ಕಾವ್ಯ ಸಂಗಾತಿ
ತರಹಿ ಗಜಲ್
ಹಮೀದಾ ಬೇಗಂ (ಎದೆಯಲವಿತ ನೋವು….)
ಅನಸೂಯ ಜಹಗೀರದಾರ


ಎದೆಯಲವಿತ ನೋವು ಮೌನದಿ ಮೊರೆಯುತಿದೆ ಬಿಡದೆ ಸಖಾ
ನೆನಪಿನ ಕೂಗೊಂದು ಚೀತ್ಕರಿಸಿ ಕರೆಯುತಿದೆ ಬಿಡದೆ ಸಖಾ
ನಿನ್ನ ಲಹರಿ ಮದಿರೆಯಾಗಿ ಹೃದಯ ಬಟ್ಟಲಲಿ ತುಳುಕಾಡಿದೆ
ಪ್ರೇಮ ಗಂಗೆಯಲಿ ಈ ಮನವು ಹರಿಯುತಿದೆ ಬಿಡದೆ ಸಖಾ
ಭಾವದ ರಂಗು ರಂಗಿನ ನೂಲು ಬಂಧಿಸಲಿಲ್ಲವೆ ನಮ್ಮ ಒಲವನ್ನು
ಅಧರ ಪಾತ್ರೇಲಿ ಹಿಡಿದಿಟ್ಟ ಮಧು ಸುರಿಯುತಿದೆ ಬಿಡದೆ ಸಖಾ
ಕಣ್ಣ ಕದಿರಿನಲಿ ಕಾಣ್ವ ನಾವು ಬಲ್ಮೆಯ ಕಿರಣ ಹಾರಗಳನು
ಜಾನ ದೀಪ್ತಿಗೆ ಮಸುಕು ತಮವು ಮೆಲ್ಲನೆ ಸರಿಯುತಿದೆ ಬಿಡದೆ ಸಖಾ
ಈ ಬಂಧ ಹೀಗಿರಲಿ ಒಲುಮೆ ಕನಕಾಭರಣ ಸವೆಯದಿರಲಿ ಅನು
ನಂಬಿಕೆ ಸುನಾದವು ಅನುಬಂಧವ ಪೊರೆಯುತಿದೆ ಬಿಡದೆ ಸಖಾ
ನಮ್ಮ ಬಿರುಕುಗಳು ಏನೇ ಇರಲಿ ನಮ್ಮೀ ಒಲವಿನ ಸೆಲೆ ಬತ್ತದೆ ಹೀಗೇ ಇರಲಾಗದೇ ಸಖೀ
ಗಜಲ್ ಕುರಿತ ಸ್ಪಂದನೆಗೆ ಧನ್ಯವಾದಗಳು.