ಡಾ ಶಶಿಕಾಂತ ಪಟ್ಟಣ ಕವಿತೆ-ಭಾವ ಕುಸುಮ

ಕಾವ್ಯ ಸಂಗಾತಿ

ಭಾವ ಕುಸುಮ

ಡಾ ಶಶಿಕಾಂತ ಪಟ್ಟಣ

ನೀನು ನನ್ನವಳು
ನನ್ನ ಭಾವ ಕುಸುಮ
ಉಸಿರು ಪರಿಮಳ
ತುಡಿತ ಮಿಡಿತ
ನನ್ನೆದೆಯ ಮೇಲೆ
ನಿನ್ನ ಭಾರ ತಲೆಯು
ರಾತ್ರಿಯಿಡಿ ಚುಕ್ಕೆ ಎಣಿಸುವ
ಕನಸುಗಳ ಕಾಗುಣಿತ
ಅಪ್ಪಳಿಸುವ ದೊಡ್ಡ ದೊಡ್ಡ
ಕಡಲ ಅಲೆಗಳು
ಮರದ ಪೋದರಿನ
ಗೂಡಿನಲ್ಲಿ
ತತ್ತಿ ಹಾಕಿದ ಚಿತ್ತಾರ
ಬೆಳಿಗ್ಗೆ ಕೂಗುವುದು ಪಕ್ಷಿ
ಶಾಂತ ಸಾಗರ
ಸೂರ್ಯ ಚಂದ್ರರ ಮಧ್ಯೆ
ಅಮರಗಾನ
ಜೀವ ಜಾಲಕೆ ಸ್ಫೂರ್ತಿಯೊಂದೆ


2 thoughts on “ಡಾ ಶಶಿಕಾಂತ ಪಟ್ಟಣ ಕವಿತೆ-ಭಾವ ಕುಸುಮ

Leave a Reply

Back To Top