ಡಾ. ತಯಬಅಲಿ.ಅ. ಹೊಂಬಳ-ನನ್ನ ತಮ್ಮ ಚಂದಿರ

ಕಾವ್ಯ ಸಂಗಾತಿ

ನನ್ನ ತಮ್ಮ ಚಂದಿರ

ಡಾ. ತಯಬಅಲಿ.ಅ. ಹೊಂಬಳ

ನನ್ನ ತಮ್ಮ
ಬಲು ಸಣ್ಣ
ಅವನು ತಿನ್ನುವನು
ಬರಿ ಮಣ್ಣ

ನನ್ನ ತಮ್ಮ ನಕ್ಕರೆ
ಹಾಲು ಸಕ್ಕರೆ
ಅವನನ್ನು ಕಂಡರೆ
ಎಲ್ಲರಿಗೂ ಬಲು ಅಕ್ಕರೆ

ನಮ್ಮೊಂದಿಗೆ ಕಿಟಲೆಯ
ಬಲು ಆಟ
ಮೈಮೇಲೆರುವವರು
ಬಲು ಕಾಟ

ನೆಲದಲ್ಲಿ ಆಟ
ಮಣ್ಣು ತಿನ್ನುವ ಪಾಠ
ಎದುರಿಸಿದರೆ ಅಳುವನು
ಜೊಲ್ಲು ಮೆತ್ತಿ ನಗುವನು.

ಅಮ್ಮನ ಮಡಿಲಲ್ಲಿ
ಸ್ವರ್ಗದ ಕನಸು
ಭಗ್ನ ಮಾಡಿದರೆ
ಬಿಡಿಸುವನು ಮನಸ್ಸು

ನಕ್ಕರೆ ನಂದಗೋಕುಲ
ಮನೆಯಂಗಳ
ಎತ್ತಿ ಮುದ್ದಾಡುವರು
ಜಗದಗಲ

ನನ್ನ ತಮ್ಮ
ಮುದ್ದು ಮುದ್ದು ಕಂದ
ನಮ್ಮೆಲ್ಲರೊಂದಿಗೆ ಆಟ
ಬಲು ಛಂದ

ನನ್ನ ತಮ್ಮ ನಕ್ಕರೆ
ಹಾಲು ಸಕ್ಕರೆ
ಅವನನ್ನು ಕಂಡರೆ
ಮನೆಯೆಲ್ಲಾ ಅಕ್ಕರೆ.


Leave a Reply

Back To Top