ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ನಶೆಯಾಗ ಬೇಡ
ನಿನ್ನ ಕಣ್ಣ ರೆಪ್ಪೆಗಳ
ಅಪ್ಜುಗೆ ಬೆಚ್ಚಗಿದೆ
ಕಣ್ಗಳ ತೆರೆಯ ಬೇಡ
ಚಳಿ ಯಾಗಿದೆ ನಂಗೆ
ನಂಗೊತ್ತು ನಿನ್ನ
ಮನವೇನೋ ಕಳೆದು ಕೊಂಡಿದೆ
ನೀ ಗಸ್ತು ತಿರುಗಬೇಡ
ಅದು ನನ್ನಲ್ಲಿದೆ
ನೀನು ಬರಸಳೆಯಬೇಡ
ಕನಸು ಬರುವ ಹೊತ್ತಿನಲಿ
ಜೋಕೆ ನನ್ನ ಕನಸುಗಳು
ಧರಣಿ ಹೂಡ ಬಹುದು
ನಿನ್ನೆದೆಯ ಅಂಗಳದಲ್ಲಿ
ಪೊರೆ ಕಳಚುತ್ತಿದೆ
ಪ್ರೇಮ ಸುಮ್ಮನಿದ್ದು ಬಿಡು
ಯಾರಿಗೂ ಹೇಳಬೇಡ
ಮೆಲ್ಲ ಬಂದಬಿಡು
ಪಿಸು ಮಾತಿನಲಿ
ಉಸಿರಿಬಿಡು
ಮುಚ್ಚಿಟ್ಟ ಭಾವ ಗಳನ್ನೇಲ್ಲಾ
ಚಂದಿರನ ಬೆಳಕಿನಲ್ಲಿ
ಮಧೂ..ವಿಗೇನೂ
ಬರವಿಲ್ಲ ಎದೆಯ ಒಲವ
ತೋಟದಲ್ಲಿ
ನಶೆ ಯಾಗಬೇಡ ನೀನು
ತುಟಿ ತುಂಬ ತುಂಬಿಹಿದು ಜೇನು !
ಪ್ರೀತಿಯ ಸುಂದರ ಅಭಿವ್ಯಕ್ತಿ
ಧನ್ಯವಾದಗಳು