ಅರ್ಚನಾ ಯಳಬೇರು-ಗಜಲ್

ಕಾವ್ಯ ಸಂಗಾತಿ

ಗಜಲ್

ಅರ್ಚನಾ ಯಳಬೇರು

ಒಲವ ತಂಗಾಳಿಯು ಬೀಸುತ್ತಿದೆ ಎಲ್ಲಿರುವೆ ಮನದರಸ
ವಿರಹದ ಬೇಗೆಯು ಸುಡುತ್ತಿದೆ ಎಲ್ಲಿರುವೆ ಮನದರಸ

ಚುಮುಚುಮು ಚಳಿಯಲ್ಲಿ ನಿನ್ನ ನೆನಪು ಬೆವರಿಳಿಸುತ್ತಿದೆ
ಅನುರಾಗದ ಅಲೆ ಅಪ್ಪಳಿಸುತ್ತಿದೆ ಎಲ್ಲಿರುವೆ ಮನದರಸ

ಹೃದಯದ ನೆಲ ಹದವಾಗಿದೆ ನಿನ್ನ ಪ್ರೇಮದ ಮಳೆಯಲ್ಲಿ
ಪ್ರೀತಿಯ ಚಿಗುರಿದು ಬೆಳೆಯುತ್ತಿದೆ ಎಲ್ಲಿರುವೆ ಮನದರಸ

ಕಾಯುತ್ತಿರುವೆನು ನಿನಗಾಗಿ ಅಂತರಂಗದ ಕದವ ತೆರೆದು
ಒಲವಿನ ಸುಮವಿದು ಅರಳುತ್ತಿದೆ ಎಲ್ಲಿರುವೆ ಮನದರಸ

ಯುಗಳ ಗೀತೆಯ ಗುನುಗುತ್ತಿದೆ ಮನದ ಮೌನವು ಕೂಡ
‘ಅರ್ಚನಾ’ಳ ಉಸಿರು ಅರಸುತ್ತಿದೆ ಎಲ್ಲಿರುವೆ ಮನದರಸ


One thought on “ಅರ್ಚನಾ ಯಳಬೇರು-ಗಜಲ್

Leave a Reply

Back To Top