ಮಾಜಾನ್ ಮಸ್ಕಿ

ಕಾವ್ಯ ಸಂಗಾತಿ

ರಂಗೋಲಿ

ಮಾಜಾನ್ ಮಸ್ಕಿ

ನನ್ನ ಮನದಲ್ಲೂ ಪ್ರಶ್ನೆ
ಮೂಡಿತ್ತು ಒಮ್ಮೆ….

ಎಂದೂ ಬಿಡಿಸದ ನಮ್ಮ
ಅಂಗಳದ ರಂಗೋಲಿ ಚಿಂತೆ
ಕಾಡುತ್ತಿದ್ದ ಮನಸು
ರಂಗೋಲಿ ಬಿಡಿಸಲು ತವಕಿಸಿತ್ತು

ಚಿತ್ರ ವಿಚಿತ್ರ ರಂಗೋಲಿ
ಚುಕ್ಕಿ ಬಿಚ್ಚಿಟ್ಟು ಕೂಡಿ ಎಣಿಸಿ
ರೇಖೆ ಎಳೆದು ಬಿಳಿ ಹಾಳೇಲಿ
ಬಿಡಿಸಿದ್ದೆ ಅಂದು….

ಯಾರ ಸುಳಿವೂ ಇಲ್ಲದ ಸಮಯ
ಬರಿದಾದ ಅಂಗಳಕ್ಕೆ ರಂಗೋಲಿಯ ಆಗಮನ
ಕಾಣ ಕಾಣುತ್ತಿದ್ದಂತೆಯೇ
ತಣ್ಣೀರಿನ ಸಿಂಚನ

ಹಿಂದಿನಿಂದಲೆ ಬಂದ ಯೋಚನೆ:
ಈಗಿಗಂತೂ ಎಲ್ಲಾ ಧರ್ಮಗಳ
ಅಂಗಳ ಖಾಲಿ ಖಾಲಿ
ಅಲ್ಲೊಂದು ಇಲ್ಲೊಂದು
ರಂಗೋಲಿ ಮಾತ್ರ ಕಾಣುತ್ತಿವೆ

ಈಗ ಪ್ರಶ್ನೆಯ ಜೊತೆಗೆ ಮತ್ತೊಂದು ಪ್ರಶ್ನೆ
ಎಷ್ಟು ಚುಕ್ಕಿಗಳಿಗೆ
ಎಂತಹ ರಂಗೋಲಿ
ಮನ ಗೋಜಲಿನಗೂಡಾಗಿದೆ

ಇಲ್ಲದಿದ್ದರರಂಗೋಲಿ
ಸಾಗುವುದು ಬದುಕಿನ ಪಯಣ
ಈ ರಂಗೋಲಿಯಂತೆ


Leave a Reply

Back To Top