ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಚೆಂಬೆಳಕು ಬಯಲಾಯ್ತು
ಮುಂಜಾವಿನ ಇಬ್ಬನಿಯೊಲು
ಶಾಂತ ಸುಂದರ ಭಾವಜೀವಿ
ಹಸಿರು ಹುಲ್ಲಿನಲೂ
ಮಕಮಲ್ಲು ಕಂಡ ಮೃದುಜೀವಿ..
ಮನದುಂಬಿದ ನಗುವು
ಪಾರಿಜಾತ ಅರಳಿದಂತೆ
ಮಾತುಗಳೋ ಮನದಿ
ಹರ್ಷ ಹೊನಲು ಹರಿದಂತೆ..
ಯಾವ ಬಣಕೂ ಸೇರದ
ಒಣ ಡಂಭಾಚಾರ ತೋರದ
ಸಮನ್ವಯದ ಪ್ರೇಮಕವಿ
ನಮ್ಮ ಚೆನ್ನವೀರ ಕಣವಿ
ಗೆಳೆತನದಿ ಎಲ್ಲರ ಸಂಜೀವಿನಿ
ಅಂತಃಕರಣ ತುಂಬಿದ ಮಂದಾಕಿನಿ
ವಿಶ್ವಭಾರತಿಗೆ ಕನ್ನಡದಾರುತಿ
ಬೆಳಗಿ ಬಯಲಾಯ್ತು ಮುಂಬೆಳಗಿನಲಿ …