ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ಸ್ವರ್ಗವೇ ನಿನ್ನ ಬೆಚ್ಚನೆ ಎದೆಗೂಡಲ್ಲಿದೆ
ಕನಸುಗಳ ಪ್ರೇಮ ಜ್ಯೋತಿ ಕಂಗಳಲ್ಲಿದೆ

ಪ್ರಗುಣನ ಆತ್ಮ ಒಡತಿ ನಾನಾಗಿರುವೆ
ಮನದ ಸೌಂದರ್ಯ ಆ ನಗುವಲ್ಲಿದೆ

ಒಲುಮೆ ಭಾವದ ಪ್ರಜ್ಞೆ ಮೂಡಿದೆ
ಮಧುರವಾದ ವರ್ಣನೆ ನುಡಿಯಲ್ಲಿದೆ

ಆತ್ಮೀಯತೆ ಒಂದಾದವು ಮತ್ತೇನು
ಸರಳ ಪ್ರೀತಿ ನಿಭಾಯಿಸುವ ರೀತಿಯಲ್ಲಿದೆ

“ಮಾಜಾ” ನಿನ್ನಲಿ ಒಂದಾಗುವ ಉತ್ಸುಕ
ಪ್ರೀತಿ ತುಂಬಿ ತುಳುಕುವ ಹೃದಯದಲ್ಲಿದೆ


About The Author

Leave a Reply

You cannot copy content of this page

Scroll to Top