ಕಾವ್ಯಸಂಗಾತಿ
ಹಮೀದಾ ಬೇಗಂ ದೇಸಾಯಿ
ಪ್ರೀತಿ ಇಲ್ಲದ ಮೇಲೆ…
ಪ್ರೀತಿ ಇಲ್ಲದ ಮೇಲೆ
ನಿರ್ವರ್ಣ ಇಂದ್ರಚಾಪ
ಪ್ರೀತಿ ಇಲ್ಲದ ಮೇಲೆ
ಹಸಿರೆಲ್ಲ ತರಗು
ಪ್ರೀತಿ ಇಲ್ಲದ ಮೇಲೆ
ನೀಲ ನಭ ಕಪ್ಪು
ಪ್ರೀತಿ ಇಲ್ಲದ ಮೇಲೆ
ಹೂವೆಲ್ಲ ಮುಳ್ಳು
ಪ್ರೀತಿ ಇಲ್ಲದ ಮೇಲೆ
ಹರಿವ ನದಿ ಸ್ತಬ್ಧ
ಪ್ರೀತಿ ಇಲ್ಲದ ಮೇಲೆ
ಹೃದಯವದು ಯಂತ್ರ
ಪ್ರೀತಿ ಇಲ್ಲದ ಮೇಲೆ
ಬದುಕು ಶೂನ್ಯ…
ಕವನವೂ ಭಾವಹೀನ…
ಹೌದು. ಪ್ರೀತಿಯೇ ಜಗತ್ತು.