ಕಾವ್ಯ ಸಂಗಾತಿ
ಡಾ. ನಾಗರತ್ನ ಅಶೋಕ ಭಾವಿಕಟ್ಟಿ
ಜೀವದೊಡೆಯ…..
ಹೇಳಿದರೆ ತೀರದ ಒಲವು
ನಿನ್ನ ನೆನೆದರೆ ಸದಾ
ಇರುವುದು ಮುಖದಿ ನಗುವು
ನಿನ್ನ ಒಲವೇ ನನಗೆ
ಬದುಕಲು ಗೆಲುವು…
ಒಲವಿನ ಗೆಳೆಯಾ
ನೀ ಮೌನಿ ಆದರೆ
ನಾ ಮಾತಾಡುವದನ್ನೇ ಮರೆತೇನು….
ನೀ ನನ್ನ ಕಂಠದ ಧ್ವನಿ
ಸ್ವರ ಸಿರಿಯು
ಭಾವದ ಮೇನೆಯ ಮೆರವಣಿಗೆಯಲಿ
ನಿನ್ನ ಮೆರೆಸಬಯಸಿ
ಸೋತುಹೋಗೇನು
ನಿನ್ನ ಒಲವ ಭಾರವ ತಡೆಯದೆ
ಕುಸಿದು ಬಿದ್ದೇನು
ತುಸು ಕಡಿತಗೊಳಿಸು
ತುಂಬಿ ತುಂಬಿ ಕೊಡುವ
ನಿನ್ನ ಒಲವಾಮೃತ ಧಾರೆಯ
ನೀ ಎಲ್ಲೆ ಹೋದರು
ನಾ ಬಿಟ್ಟಿರುವೆನೇನು
ನೀ ನನಗಂಟಿದ ನೆರಳು
ಇರುಳಲೂ ನನ್ನೊಳಗೆ ಇರುವ
ಒಲವ ಪ್ರತಿಫಲವು
ಶತಕ ಬಾರಿಸಿ ನೋಡು
ಆಗಲೂ ಇರುವೆ ನಿನ್ನೊಡನೆ
ಹಗಲು ಇರುಳು..
ಶಷ್ಠಿ ಶತಾಬ್ಧಿಯಲೂ
ಹೇಳುವೆ ನಾ ನಿನಗೆ
ಪ್ರೇಮಿಗಳ ದಿನದ
ಶುಭಾಶಯವು
ಯಾಕೆಂದರೆ ನಮ್ಮಿಬ್ಬರ ಒಲವು
ನವ ನವೀನ ಪ್ರತಿ ವರುಷವು