ರೋಹಿಣಿ ಯಾದವಾಡ

ಕಾವ್ಯ ಸಂಗಾತಿ

ರೋಹಿಣಿ ಯಾದವಾಡ

ನೆನಹು

ಮರೆಯದಾಗಿದೆ ಮನವು ನಿನ್ನನು
ನೆನೆದು ಕನವ ಎಸ್ರಿಸುತಿದೆ
ಹೃದಯ
ಪ್ರೀತಿಯ ಆಳ ಅಳೆಯಲಾಗದು
ಅಚ್ಚ ಹಸಿರಾಗಿ ನೆಲೆ ನಿಂತಿದೆ

ಪ್ರೇಮದ ಗಂಗೆ ಹರಿಸಿ ಸುಮ್ಮನಿರುವೆ
ಭಾವನೆಗಳ ಸುರಿಮಳೆ ಸುರಿಸಿ ನಿಂತೆ
ಹೃದಯ ತಟ್ಟಿದ ಪ್ರೀತಿ ನಿನ್ನದು
ಮರೆಯಲೆಂತು ಹೇಳು ನಿನ್ನನು

ನೋವು ನಲಿವಿನ ಸಹಬಾಗಿ ನೀನು
ಸುಖ ದುಃಖದ ಸಮಭಾಗಿ ನೀನಾದೆ
ಸಮರಸವ ಬಿತ್ತಿ ಬೆಳೆಸಿದೆ ನನ್ನಲಿ
ಸಮಭಾವ ತಾಳಲು ಕಲಿಸಿದ ಶಿಲ್ಪಿ

ಜೊತೆಗೂಡಿ ನಲಿದ ಕ್ಷಣಗಳು ಮಾಸಿಲ್ಲ
ಹುಸಿಮುನಿಸ ಕೋಪ ತಣಿದಿಲ್ಲ ನನ್ನಲ್ಲಿ
ಹಸಿ ಹಸಿ ನೆನಪುಗಳು ಹಸಿರಾಗಿಲು
ಮರೆಯಲೆಂತು ಹೇಳು ಸಖ ನಿನ್ನನು.


Leave a Reply

Back To Top