ಪುಷ್ಪಾ ಮಾಳಕೊಪ್ಪ

ವ್ಯಾಲಂಟೈನ್ ವಿಶೇಷ

ಪುಷ್ಪಾ ಮಾಳಕೊಪ್ಪ

ಒಲವ ಹರಿವು

ಕಾರಣವೇತಕೆ ಒಲವಿನ ಹರಿವಿಗೆ
ಜಾರಿದೆ ಜಲವಾಗಿ
ಜುಳು ಜುಳು ಝರಿಯಾಗಿ ||
ಸೋಕಿದ ಅನುರಾಗದ ಇಬ್ಬನಿ
ತಬ್ಬಿದೆ ಹದವಾಗಿ
ಬೆಚ್ಚನೆ ಹನಿಯಾಗಿ ||

ಜೀವಜೀವದಲಿ ಪ್ರೀತಿಯು ಬೆಸೆಯಲು ಕಾರಣ ಬೇಕಿಲ್ಲ
ನೋಟವೆ ಸಾಕಲ್ಲ |
ಭಾವದಂಕುರವು ಚಿಗಿದು ಚಿಗುರಿರಲು
ಹಚ್ಚನೆ ಹಸುರೆಲ್ಲ
ಪುಷ್ಪವೆ ಬನವೆಲ್ಲ ||

ಮಧುಮಾಸದಲ್ಲಿ ತಂಗಾಳಿಯಲ್ಲಿ
ಸೂಸುತಿರಲು ಗಂಧ
ಬೆಸೆದಿದೆ ಅನುಬಂಧ |
ಬೆರೆತನೇಹ ಹಾಡಾಗಿ ಹೊಮ್ಮಿಹುದು ಕೋಗಿಲೆ ದನಿಯಾಗಿ
ಮಧುರಗೀತೆಯಾಗಿ ||

ತೀರದಲ್ಲಿ ಅಲೆ ತೇಲಿ ಬರುವಂತೆ
ಮರಳಿ ಬರುವ ನೆನಪು
ಜೀವಕೆನಿತು ಹೊಳಪು |
ಒಲಿದ ಮನಕಿಲ್ಲಿ ಬೇರೇನು ಬೇಕು
ಹೊಮ್ಮವ ಹೂಗನಸು
ಮಧುವಿನೊಲವ ಸೊಗಸು ||


Leave a Reply

Back To Top