ವ್ಯಾಲಂಟೈನ್ ವಿಶೇಷ
ಆದಪ್ಪ ಹೆಂಬಾ ಮಸ್ಕಿ
ಮೌನ ಪ್ರೀತಿ
ವರುಷಗಳುರುಳಿದರೂ
ನಿನ್ನ ಕಣ್ಣೋಟ
ಸೆಳೆಯುತಿದೆ ಸೂಜಿಗಲ್ಲಿನಂದದಿ
ನಿತ್ಯ ನನ್ನನು
ಬಟ್ಟಲು ಕಂಗಳ ಚೆಲುವೆ
ಬಳಸಿ ಬಿಸಿ ಮುತ್ತೊಂದನಿಡಲೇ
ಆ ಕಣ್ಣಿಗೆ ?
ನಾ ತಣ್ಣಗಾಗುವೆ.
ನಿನ್ನ ಹೆಜ್ಜೆಯ ಸದ್ದು
ಕಾಲ್ಗೆಜ್ಜೆ ನಾದ
ನನ್ನೆದೆಯ ಬಿಟ್ಟು
ಕೇಳಿಲ್ಲ ಯಾರಿಗೂ
ಸೂಕ್ಷ್ಮ ಸುಂದರಿ
ನಿನಹುದಹುದು
ಮನದೊಳಗೆ ಬಾರೆ
ಕಾಣಲ್ಲ ಯಾರಿಗೂ
ಎಲ್ಲದಕು ಮೌನ
ಮುಗುಳು ನಗೆಯ ಉತ್ತರ
ನಿಲುಕುತ್ತಿಲ್ಲ ನಿನ್ನ ಪ್ರೀತಿ
ಅದಿಹುದು ಆಕಾಶದೆತ್ತರ
ನನ್ನ ಪ್ರೀತಿಯದು
ತೊಳೆದ ಸ್ವಾತಿ ಮುತ್ತು
ಅಂತ್ಯಗೊಳಿಸದಿರದನು
ಬದುಕು ಬಾಡೀತು ಅತ್ತು ಅತ್ತು
ಕಾಡಬೇಡವೆ ಚಿನ್ನ
ತಣಿಸು ನನ್ನೆದೆಯ ತಲ್ಲಣವ
ಅರಳಿಸೆನ್ನ ಜೀವನವ
ಬಾಡಿ ಬೀಳುವ ಮುನ್ನ
Lovely poem