ಸವಿತಾ ಇನಾಮದಾರ್

ವ್ಯಾಲಂಟೈನ್ ವಿಶೇಷ

ಸವಿತಾ ಇನಾಮದಾರ್

ಬಾಹು ಬಂಧನದಾ ಭಾಷೆ’

ಎನ್ನ ಕವನದ ಸಾಲುಗಳಲಿ
ನಿನ್ನ ಬಣ್ಣಿಸ ಬಲ್ಲೆನು
ಎನ್ನ ಸ್ವರದ ಮೋಡಿಯಲ್ಲಿ
ನಿನ್ನ ಬಂಧಿಸ ಬಲ್ಲೆನು…..

ಸುತ್ತ ಮುತ್ತಲು ಕತ್ತಲೆ ಕವಿದರು
ನಿನ್ನ ಸ್ವರವೊಂದೇ ಸಾಕು
ನೀನು ಮೀಟಿದೆ ಪ್ರೆಮ ಪಲ್ಲವಿ
ಹಬ್ಬಿತು ಪ್ರೀತಿಯ ಹೊಂಬೆಳಕು….
ಎನ್ನ ಕವನದ ಸಾಲುಗಳಲಿ …

ಎನ್ನ ರೆಪ್ಪೆಗಳಪ್ಪುಗೆಯಲ್ಲಿ ಬೆಚ್ಚಗೆ ನೀನು ಕುಳಿತಿರುವೆ…
ಕಣ್ಣು ತೆರೆದುರೆ ಓಡಿ ಹೋದರೆ
ಎಂದು ನಾನು ಅಂಜುವೆ….
ಎನ್ನ ಕವನದ ಸಾಲುಗಳಲಿ ..

ನೀಲಿ ನಭದ ಅರಮನೆಯಲ್ಲಿ
ನಿನಗಾಗಿ ಕಾದಿರುವೆ
ಕಂಗೊಳಿಸಿದವು ನಲ್ಲ ನೀಡಿದ
ರಂಗಿನೋಕುಳಿಯಾ ಒಡವೆ…
ಎನ್ನ ಕವನದ ಸಾಲುಗಳಲಿ

ಎನ್ನ ಹೃದಯ ಮಂದಿರದಲ್ಲಿ
ನಿನ್ನ ಪೂಜಿಸುವ ಆಸೆ
ಪ್ರತಿ ಜನ್ಮಕೂ ಕೊಡು ನೀ ಎನಗೆ ಬಾಹು ಬಂಧನದಾ ಭಾಷೆ…


12 thoughts on “ಸವಿತಾ ಇನಾಮದಾರ್

Leave a Reply

Back To Top