ವ್ಯಾಲಂಟೈನ್ ವಿಶೇಷ
ಟಿ.ದಾದಾಪೀರ್
‘ಎದೆಯ ಸದ್ದು
ನೀನು ಚಿವುಟಿದಷ್ಟು
ಪ್ರೀತಿ
ಮತ್ತೆ ಮತ್ತೆ
ಹುಟ್ಟುತ್ತಿದೆ
ನಿನ್ನ ಕೈಗಳಲ್ಲಿ
ನೆತ್ತರಿನ ಮೆಹಂದಿ
ಬದುಕಿನ ಹಾಡ ಬರೆದಿದೆ
ಬಳಿ ಬಾರದಂತೆ
ತಡೆಯುವ ನೀನು
ನಿದ್ರೆ ಹತ್ತುವುದನ್ನೆ ಕಾಯುತ್ತಿಯಾ
ಕನಸಲಿ ಬರುವ ನಿನ್ನ ದಾರಿಯನ್ನ
ನಾನ್ಯಾವತ್ತು ತಡೆದಿಲ್ಲ ಗೆಳತಿ
ನೀನು ಕಲಿಸಿದೆಲ್ಲವು ಪ್ರೀತಿಯ
ಹೊಸ ಪರಿಭಾಷೆಗಳೆ
ನಿನ್ನ ಸುತ್ತ ಸುತ್ತಿ
ಬೆಂಕಿಗೆ ರೆಕ್ಕೆ ಸುಟ್ಟ
ಚಿಟ್ಟೆಯಂತೆ
ವಿಲ ವಿಲನೆ ಒದ್ದಾಡಿದ್ದೆನೆ
ನೀನು ಹಚ್ಚಿಟ್ಟ ನಗೆಯ ದೀಪವ
ಉರಿಸುತ್ತಿದ್ದೆನೆ
ಚಂದಿರನ ಬೆಳದಿಂಗಳು
ಸಾಲದ ರಾತ್ರಿಗಳಲ್ಲಿ
ಕದ್ದು ಮುಚ್ಚಿ
ನಿನ್ನ ಹಿಂದೆಯೆ ಸುತ್ತಿದ್ದೆನೆ
ಕಡು ಮೋಹಿಯಂತೆ
ನೀನೆನೂ ಕಡಿಮೆ ಇಲ್ಲ
ಜೀವ ಮಿಡಿತದ ಸದ್ದು
ಹೃದಯ ಬಸಿದ ಬನಿ
ಇನ್ನೆಷ್ಟು ಮುದ್ದಿಸಲಿ ನಿನ್ನ
ನನ್ನೆದೆಯ ಸದ್ದು ನಿನಗೆ ಸಂಗೀತವಾಗಲಿ
ಚೆಂದದ ಕವಿತೆ
Thanks shushila mdm