ವ್ಯಾಲಂಟೈನ್ ವಿಶೇಷ
ನಾಗರತ್ನ ಎಚ್ ಗಂಗಾವತಿ.
ಪಯಣ
ನಿನ್ನಯ ಪ್ರೀತಿಯ
ಕಣ್ಣಲಿ ಕಾಣುತಿಹೆ
ನನ್ನಯ ಬಿಂಬವು.
ಅದಕ್ಕೆ ಮೂಡಿದೆ
ನನ್ನ ಮೊಗದ ಚೆಲುವು
ನಿನ್ನ ಪ್ರೀತಿಯ ಒಲವು.
ಕನಸು ಕನ್ನಡಿಯಂತೆ
ಮನಸ್ಸು ಮಿಂಚಿನಂತೆ
ಹೊಳೆದಾಗ ನಾ ನಿಲ್ಲುವೆ ನಿನ್ನ ಜೊತೆಯಲಿ.
ಪ್ರೀತಿ ಎಂಬ ಬದುಕಲಿಸಾಗೋಣ ಒಟ್ಟಾಗಿ ಜೊತೆಯಲಿ
ಕೈಹಿಡಿದು ನಡೆಸು ಬಾಳೆಂಬ ಪಯಣದಲಿ.