ಮಲ್ಲಿಕಾರ್ಜುನ ಪಾಟೀಲ

ವ್ಯಾಲಂಟೈನ್ ವಿಶೇಷ

ಮಲ್ಲಿಕಾರ್ಜುನ ಪಾಟೀಲ

ಸೋತಿದೆ ಮನಸ್ಸು

ಅವಳಿಗಾಗಿ ಸೋತಿದೆ ಈ ಮನಸ್ಸು
ಜೊತೆಗೆ ಬದುಕುದೊಂದೆ ನನ್ನ ಕನಸು
ತುಟಿಯಂಚಿನಲ್ಲೇ ನೀ ನನ್ನ ನಗಿಸು
ಆ ನಗುವಿನಲ್ಲೇ ಕಣ್ಣೀರ ನೀ ಒರೆಸು

ಅವಳ ಮೊಗವದು ಕೃಷ್ಣತಾವರೆ
ನಲ್ಲೆ ನಡೆದರೆ ಅವಳೆ ಆ ಅಪ್ಸರೆ
ಮಾತಿನಲಿ ಚತುರಂಗೆ ನೀ ಚತುರೆ
ಮೌನವಾದರೆ ಮಸಣಕ್ಕೆ ನನ್ನ ಉಸಿರೆ

ಗಾಯನಕ್ಕೆ ನಿನ್ನ ಧ್ವನಿಯು ಕೃಷ್ಣಗೊಳಲು
ಸೌಂದರ್ಯಕ್ಕೆ ನಿನ್ನ ರೂಪವೇ ಹೂನಲು
ನೃತ್ಯದಲ್ಲಿ ನೀನೆಂದೆಂದೂ ನವಿಲೇ
ಚೆಲುವಿಗೆ ಗಂಧರ್ವ ಕನ್ಯೆಗಿಂತ ಮೊದಲೇ

ನಿನ್ನ ಸ್ನೇಹ ಪಡೆದ ಆ ದಿನ
ನನ್ನ ಮನಕೆ ಖುಷಿಯ ಸುದಿನ
ಸೋತಿದೆ ಮನವು ನಿನ್ನ ನಗುವಿಗೆ
ಗೆಲ್ಲುತಿದೆ ಒಲವ ಸ್ನೇಹ ಪ್ರೀತಿಗೆ

ನಿನಾದೆ ಗೆಳತಿ ನನಗೆ ಗಗನ ಕುಸುಮ
ಚಿಗುರೊಡೆಯಲಿಲ್ಲ ಈ ಪ್ರೇಮದ ಸುಮ
ಕನಸಲ್ಲೂ ಕೂಡ ನಿನ್ನದೆ ಘಮ ಘಮ
ಕಾಯುವೇನು ನಾನು ಏಳೇಳು ಜನುಮ


One thought on “ಮಲ್ಲಿಕಾರ್ಜುನ ಪಾಟೀಲ

Leave a Reply

Back To Top