ಪ್ರಭಾವತಿ ಎಸ್ ದೇಸಾಯಿ

ವ್ಯಾಲಂಟೈನ್ ಡೇ

ಪ್ರಭಾವತಿ ಎಸ್ ದೇಸಾಯಿ

ಗಜಲ್

ಯುವ ಜೋಡಿಯ ಮಿಲನಕೆ ಕಾತರಿಸಿದೆ ಈ ಇರುಳು
ರಾತಕಿರಾಣಿ ಘಮ ಅಮಲೇರಿಸಿದೆ ಈ ಇರುಳು

ಬಾನ ಬಯಲಲಿ ಮಿನಗುತಿವೆ ಬೆಳ್ಳಿ ಹೂಗಳು ಅರಳಿ
ಚಕೋರವು ಚಂದಿರನನು ಕಾಯುತಿದೆ ಈ ಇರುಳು

ವಿರಹದ ಕುಲುಮೆಯಲಿ ಬೇಯುತಿವೆ ಒಲಿದ ಜೀವಿಗಳು
ಹೂ ಮಂಚ ಹೃದಯ ಬೆಸೆಯಲು ಕರೆಯುತಿದೆ ಈ ಇರುಳು

ಯೌವನದ ಪ್ರೀತಿಯ ಅಪ್ಪುಗೆಯಲಿ ಬೇಡ ಸೆಡವು
ಒಲವ ಮುತ್ತಿಲ್ಲದೆ ಅಧರ ಬಿರಿದಿದೆ ಈ ಇರುಳು

ಉರಿವ ದೀಪ ಮೋಹಿಸಿ ಕುಣಿಯುತಿವೆ ಪತಂಗಗಳು
ರೆಕ್ಕೆಗಳು ಸುಟ್ಟು ಮೋಹ ಶವವಾಗಿದೆ ಈ ಇರುಳು

ಬೆಳದಿಂಗಳು ಇಳಿದು ಬಂದು ಧಾರಿಣಿಯ ಅಪ್ಪಿದೆ
ಶಯನ ಗೃಹ ನಮಗಾಗಿ ಸಿಂಗರಿಸಿದೆ ಈ ಇರುಳು

ಎದೆಯ ಕದವ ತೆರೆದು ಕಣ್ಣ “ಪ್ರಭೆ” ಯು ಹರಡಿರುವೆ
ಮೆಲು ಹೆಜ್ಜೆಗಳ ಇಡುತ ಬಾ ಜಾರುತಿದೆ ಈ ಇರುಳು


ಪ್ರಭಾವತಿ ಎಸ್ ದೇಸಾಯಿ

4 thoughts on “ಪ್ರಭಾವತಿ ಎಸ್ ದೇಸಾಯಿ

  1. ಸುಂದರವಾದ ಭಾವಚಿತ್ರದೊಂದಿಗೆ ಸೊಗಸಾಗಿ ಮೂಡಿ ಬಂದ ಪ್ರೇಮಿಗಳ ವಿಶೇಷ ದಿನದ ಈ ಗಜಲ್ ಚೆನ್ನಾಗಿ ಮೂಡಿ ಬಂದಿದೆ.

  2. ಪ್ರೇಮಿಗಳ ದಿನಕೆ ಸೂಕ್ತವಾಗಿ ಮೂಡಿಬಂದಿದೆ ಗಜಲ್, ಅಮ್ಮ

  3. ಪ್ರೇಮಿಗಳ ದಿನಕ್ಕೇ ವಿಶೇಷವಾದ ಗಜಲ್ ಕೊಡಿಗೆ ಅಮ್ಮಾ ಸುಪರ್

  4. ತುಂಬಾ ಮಧುರ ವಾದ ಪ್ರೀತಿಯ ಅಭಿವ್ಯಕ್ತಿ
    ಓದುಗರಿಗೆ ಇದರಿಂದ ಲೆ ಒದಗಿ ದೆ ಇನ್ನು ಶಕ್ತಿ

Leave a Reply

Back To Top