ಮಾಜಾನ್ ಮಸ್ಕಿ

ವ್ಯಾಲಂಟೈನ್ ವಿಶೇಷ

ಮಾಜಾನ್ ಮಸ್ಕಿ

ಗಜಲ್

ತಾಜಮಹಲ್ ಪ್ರೇಮದ ಕುರುಹುವಾಗಿ ನಿಂತಿದೆ ಇನಿಯ
ಪ್ರೇಮಿಗಳಿಬ್ಬರ ಪ್ರೀತಿಯ ಸಂಕೇತವಾಗಿ ಬಿಂಬಿಸುತ್ತಿದೆ ಇನಿಯ

ಯುಗಗಳು ಕಳೆದರೂ ಮರೆಯದ ಪ್ರೇಮ ಕಥೆ ಆಗಿದವುದು
ಪಾರಿವಾಳಗಳಾಗಿ ಇಂದಿಗೂ ಬಂದು ಸಂಧಿಸುತ್ತಿದೆ ಇನಿಯ

ಶುಭ್ರ ಅಮೃತ ಶಿಲೆಯ ಹೊಳಪಿನಂತಹ ಒಲುಮೆ ಇದು
ನೋಡಲ್ಲಿ ಸುಂದರ ಸೌಧ ಕಂಗೊಳಿಸುತ್ತಿದೆ ಇನಿಯ

ನಾವಿಬ್ಬರೂ ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದೇವೆ ಅಲ್ಲವೇ
ನಮ್ಮಿಬ್ಬರ ಪ್ರೇಮ ಸಂಕೇತ ಯಾವುದು ಉಳಿಯುತ್ತಿದೆ ಇನಿಯ

ದೇವರು ಕೊಟ್ಟ ವರ ಹೃದಯಗಳು ಒಂದಾಗಿವೆ “ಮಾಜಾ”
ನೂರಾರು ಜನ್ಮಕ್ಕೂ ಜೀವ ಜೊತೆಯಾಗಿ ಬರುತ್ತಿದೆ ಇನಿಯ


Leave a Reply

Back To Top