ಹುಳಿಯಾರ್ ಷಬ್ಬೀರ್

ವ್ಯಾಲಂಟೈನ್ ವಿಶೇಷ

ಹುಳಿಯಾರ್ ಷಬ್ಬೀರ್

ಪ್ರೇಮಿಗಳ ದಿನ

ಪ್ರೇಮಿ…

ಗೆಳೆಯ: ಬಾಳ ನೌಕೆಯ ಪ್ರೇಮಿ ನಾನು
ನನ್ನೆದೆಯಾ
ಮೇಲಿಟ್ಟ ನಿನ್ನ
ಒಲವಿನ ಹೆಜ್ಜೆ
ಅಳಿಸಲಾರದಷ್ಟು ಮುದ್ರೆ
ಒತ್ತಿದೆ ಗೆಳತಿ…

ಗೆಳತಿ: ನೀನಿಲ್ಲದೆ
ಬದುಕಿಲ್ಲ
ಬೆಳಕಿಲ್ಲ
ಉತ್ಸಾಹದ ಸುಳಿವಿಲ್ಲ
ಗೆಳೆಯ…

ಸಖ: ಬಾರದಿರಲಿ
ಪ್ರವಾಹ
ಈ ಒಲವಿಗೆ
ಒಲವು ಒಲವಾಗಿರಲಿ
ಸಖಿ..

ಸಖಿ: ನಿನ್ನ
ಕಣ್ಣೋಟದ
ಮಿಂಚಿನ ಮರೆಯಲ್ಲಿ
ಜೋರು ಸೋನೆ ಮಳೆ
ಸಖ…

ಜೀವ: ನನ್ನ ಭಾವವೇ
ಹಗಲಾದ ನೀನು
ಕತ್ತಲ ಕನವರಿಕೆ
ಕಣೇ..

ಭಾವ: ಕತ್ತಲಾದ ನಾನು
ನಿನ್ನ ಹಗಲಿನ
ಮನವರಿಕೆಯ ಜೀವದ
ಜೀವ ಕಣೋ..

ನನ್ನವನು: ನನ್ನವಳೇ ನೀನೊಂದು
ಪ್ರಚೋದಕ ಶಕ್ತಿ
ಚಿಂತನೆಯ
ಮೀಮಾಂಸೆಯೂ..

ನನ್ನವಳು: ನನ್ನವನೇ ಜಾಸ್ತಿ

ಉಬ್ಬಿಸಬೇಡ


Leave a Reply

Back To Top