ಮಾಜಾನ್ ಮಸ್ಕಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ಸಂಸಾರ ಕೆಸರಲ್ಲಿ ಅರಳಿದ ಕಮಲ
ಮಿಂದು ಹೊನ್ನ ಬೆಳಕಲ್ಲಿ ಅರಳಿದ ಕಮಲ

ಸೌಂದರ್ಯಕ್ಕೆ ಸೋಲದ ಮನಸುಂಟೇ
ಹೊಂಗನಸ ಮನಸ್ಸಲ್ಲಿ ಅರಳಿದ ಕಮಲ

ಕೋಮಲ ಮಧುರ ಭಾವದ ಜೀವವೇ
ಬೆಳದಿಂಗಳ ತಂಪಲ್ಲಿ ಅರಳಿದ ಕಮಲ

ಸೂರೆಗೊಂಡಿತು ಹೃದಯ ಭಾವಗಳು
ಸುತ್ತಲೂ ಹರಡಿ ಕಂಪಲ್ಲಿ ಅರಳಿದ ಕಮಲ

ಹೊರ ಹೊಮ್ಮಿತು ಆನಂದವು “ಮಾಜಾ”
ಶುಭ ಹಾರೈಕೆಯಲ್ಲಿ ಅರಳಿದ ಕಮಲ


Leave a Reply

Back To Top