ಐಗೂರು ಮೋಹನ್ ದಾಸ್, ಜಿ.ಕವಿತೆ-ಕನಸು…..!

ಕಾವ್ಯ ಸಂಗಾತಿ

ಐಗೂರು ಮೋಹನ್ ದಾಸ್

ಕನಸು

ಅಂದು……,
ಆತ ನಿತ್ಯ ದುಬಾರಿ
ಬೆಲೆಯ ‘ಕನಸು’ಗಳನ್ನು
ಮಾತ್ರ ಕಾಣುತ್ತಿದ್ದ…!

ಆಗ ಈತನ
ಸುತ್ತ-ಮುತ್ತ ಇದ್ದ
ಜಗತ್ತಿನ ಹಲವು ಕಣ್ಣುಗಳು
ಈತ ‘ಹುಚ್ಚ’ನಾಗಿರಬಹುದು
ಎಂದು ಹೇಳುತ್ತಾ ನಗುತ್ತಿತ್ತು…!

ಇಂದು…….,
ಆತ ನಿತ್ಯ ಕಂಡ
ಎಲ್ಲಾ ‘ಕನಸು’ಗಳನ್ನು
‘ನನಸು’ ಮಾಡಿಯೇ
ಬಿಟ್ಟ…!

ಆಗ ಈತನ
ಸುತ್ತ-ಮುತ್ತ ಇದ್ದ
ಜಗತ್ತಿನ ಹಲವು ಕಣ್ಣುಗಳು
‘ ಅಸೂಯೆ’ಯಿಂದ ಕುರುಡಾಗಿ
‘ಹುಚ್ಚರು ‘ರೀತಿ ಅಲೆಯುತ್ತಾ
ರೋಧಿಸುತ್ತಿತ್ತು…!

ಈಗ…..,
ಒಂದು ಮಾತು
ಮಾತ್ರ ಸತ್ಯ…!
ಈ ಭೂಮಿಯಲ್ಲಿ
‘ಬೆವರು’ ಹನಿಗಳ
ಫಲವನ್ನು ನೋಡಿ
ಅಸೂಯೆ ಪಡುವ
ಮಂದಿಗೆ ‘ನೆಮ್ಮದಿ’ಯಿಂದ
ನಿದ್ರಿಸಲು ಮಾತ್ರ
ಸಾಧ್ಯವಿಲ್ಲ….!!!-


Leave a Reply

Back To Top