ಕಾವ್ಯ ಸಂಗಾತಿ
ಪ್ರೀತಿ ಅರಳು ಮರಳು
ಪ್ರಿಯಾಂಕ ಪೋದ್ದಾರ್
ನನ್ನ ಪ್ರಪಂಚವೇ ನೀನೆಂದು
ಬಣ್ಣದ ಕನಸುಗಳ ಕಂಡೇ
ಮನಸಲಿ ನಿನ್ನನ್ನೆ ನೆನೆಯುತ್ತಾ ಹುಚ್ಚಿಯಾದೆ
ಕೊನೆವರೆಗೂ ಜೊತೆಯಾಗಿರುವೆ ಎಂದು ನಂಬಿದೆ
ಆ ಬಣ್ಣದ ಪ್ರಪಂಚ ಇಂದು ಬರಿದಾದಂತಾಗಿದೆ
ಪ್ರೀತಿಸಲು ಕಾರಣವೇ ಗೊತ್ತಿಲ್ಲವೆಂದೆ
ಇಂದು ಕಾರಣವಿಲ್ಲದೆ ನನ್ನಿಂದಾ ದೂರಾದೆ
ನಿನ್ನ ಪ್ರೀತಿಯ ನೆನಪಲ್ಲೇ ಬದುಕುತ್ತಿರುವೆನು
ನನ್ನದೇ ಆದ ಕತ್ತಲೆಯ ಪ್ರಪಂಚದಲ್ಲಿ ಇಂದು ನಾನು