ಕಾವ್ಯ ಸಂಗಾತಿ
ಮಾಧುರ್ಯತೆ
ಮಾಜಾನ್ ಮಸ್ಕಿ
ಜಡಿಮಳೆಯ ತಂಗಾಳಿ
ನಿನ್ನ ಸನಿಹ ಬಯಸಿತು
ಹೊತ್ತು ತಂದ ಸುಗಂಧ
ಮತ್ತೇರಿಸಿತು
ಅಂಗಳದ ಪಾರಿಜಾತ
ನಕ್ಕು ಕೇಳಿತು
ನಲ್ಲನ ನೆನಪೇ…??
ಉಷೆಯ ರಂಗು ಕೆನ್ನೆಯಲ್ಲಿ
ಗೆರಿಕೆದರಿ ನರ್ತಿಸಿತು
ಹೃದಯ ಕೋಗಿಲೆ ತನ್ತಾನೆ
ಮಧುರ ಗೀತೆ ಹಾಡಿತು
ಮೈಯ್ಯಲ್ಲಾ ಮಿಂಚು ಸಂಚರಿಸಿ
ಕಂಗಳರಳಿ ಬೆಳಕು ಮೂಡಿಸಿತು
ಮಧುರ ಪ್ರೇಮ….
ಕತ್ತಲೆ ಕಳೆದು ಬೆಳಕು ಹರಿಸಿತು