ಸಾಧನಕೇರಿಯ ಸಾಧಕ-ಕವಿತೆ-ಮಹಾದೇವಹಳ್ಳಿ ಚಿಕ್ಕಸೂಗೂರು

ಕಾವ್ಯ ಸಂಗಾತಿ

ಸಾಧನಕೇರಿಯ ಸಾಧಕ

ಮಹಾದೇವಹಳ್ಳಿ ಚಿಕ್ಕಸೂಗೂರು

ಸಾಧನಕೇರಿಯ ಸಾಧಕ
ಇವರೇ ಅಂಬಿಕಾತನಯದತ್ತ
ಚಿತ್ತಿ ಮಳೆಯ ಸುರಿಸಿ ಇವರು
ಸೆಳೆದರು ಎಲ್ಲರ ಚಿತ್ತ
ನಾನು ನೀನು ಆನು ತಾನೆನ್ನುತ
ಮಾಡಿದರು ಕರಾಮತ್ತ
ಭವದ ಜಂಜಾಟಗಳಿಗೆ
ಹೆದರದೆ ಎದೆಗೊಟ್ಟು ನಿಂತಾತ |

ಆಡುಭಾಷೆಯಲ್ಲಿ ಕವನಕಟ್ಟಿ
ಹಾಡಿ ಕುಣಿದಾಡಿದಾತ
ಸರಳ ಸಜ್ಜನಿಕೆಯ ಹಾದಿಯಲಿ
ನಡೆದ ಮೇರುಪರ್ವತ
ಪದಗಳಲೇ ಕಣ್ಣಾಲೆಗಳ
ಹಾಕಿಸಿದ ಮಾಂತ್ರಿಕನೀತ
ನಿಮ್ಮನ್ನು ಪಡೆದ ಕರುನಾಡಿನ
ಜನರು ನಾವು ಪುನೀತ |

ಒಂದೊಂದು ಪದವು
ಆಣಿಮುತ್ತು ಪೋಣಿಸುತಿತ್ತ
ಹಲವು ಪಾರಿತೋಷಕಗಳ
ಗೊಂಚಲು ಓಡಿಬಂದಿತ್ತ
ಜ್ಞಾನಪೀಠವು ಬರಸೆಳೆದು
ಬಂತು ನಿಮ್ಮಯ ಜ್ಞಾನಕ್ಕ
ಸಾಹಿತ್ಯ ಲೋಕದ ಕಣ್ಮಣಿ
ನೀವೇ ಸರ್ವ ಕಾಲಕ್ಕ |


2 thoughts on “ಸಾಧನಕೇರಿಯ ಸಾಧಕ-ಕವಿತೆ-ಮಹಾದೇವಹಳ್ಳಿ ಚಿಕ್ಕಸೂಗೂರು

Leave a Reply

Back To Top