ಕಾವ್ಯ ಸಂಗಾತಿ
ಮೋಹ ಮಾಯಕೆ
ಪಲ್ಲವಿ ಕಾಂಬಳೆ
ಯಾವ ಧ್ಯಾನಕೆ
ಮೋಹ ಮಾಯಕೆ
ಮಣ್ಣಾದೆ ಚಿತ್ತವೇ
ನೆಚ್ಚಿದ ಮಣ್ಣ
ಮಡಕೆ ಮಾಡಿದೆ
ಮರಳು ದಾರಿಯ ತುಳಿಯುತ
ಜೀವರಸವನು ಹರಿಸುತ
ಇಟ್ಟಬೆಂಕಿಗೆ
ಸುಟ್ಟು ಸೋತು
ತುಂಬದಾಯಿತೆ ಜ್ಞಾನವು
ಅಳುಕ ಸೀಳು
ಮೂಡಿಕೊನೆಗೆ
ಖಾಲಿ ಉಳಿಯಿತೆ ಮಡಿಕೆಯು
ಒಡೆದು ಓಕುಳಿ ಆಡಿದರೇನು
ಮರಳಿ ಬರುವನೆ ಕಾಲನು
ಮತ್ತೆ ಮಡಕೆ ಮೂಡಲು…..
Super kavite medam odi beragade but yako antha tilitila