ಯ.ಮಾ.ಯಾಕೊಳ್ಳಿಯವರಕವಿತೆ-ಹೇಳದ ಮಾತು

ಕಾವ್ಯ ಸಂಗಾತಿ

ಹೇಳದ ಮಾತು

ಯ.ಮಾ.ಯಾಕೊಳ್ಳಿ

ಎಷ್ಟೊ ದೂರ ಬಂದೆವೀಗ
ನಮಗೆ ಏನೂ ತಿಳಿಯದೆ
ಮರೆತು ಹೇಗೆ ಹೋಗೋದೀಗ
ನಿಂತೆವಿಲ್ಲಿ ತಿಳಿಯದೆ

ಏಕೆ ಬಂತೋ ಹೇಗೇ ಬಂತೋ
ಈ ಜನುಮದೊಲವು
ಮಾತು ವಿವರಣೆಗತೀತವು
ಏನು‌ ಇದರ ಮಜವು

ಹೇಳದೆನೆ ಕೇಳದೇನೆ ಮನವು
ನೆನೆವುದು ಆ ಹೃದಯವ
ಹೇಗೆ ತಡೆಯಲಿ ಸಾಗರದ ಕಡೆ
ಓಡೊವಂತ ನದಿಯ

ದೂರ ಸರಿಯೊ ದಾರಿ‌ ಕಾಣದೆ
ಚಡಪಡಿಸಿದೆ ಜೀವ
ಮರೆಯಲಾರೆ ,ಬಿಟ್ಟು
ಇರಲೂ ಆಗದ ತಹತಹ

ಲೋಕವೆಂದು ಒಪ್ಪದಂಥ
ಸಂಕೀರ್ಣ ಬಂಧವು
ಮನವು ಮಾತ್ರ ಬೇಡೊದಿದನು
ಏನು ಚಂದವು


One thought on “ಯ.ಮಾ.ಯಾಕೊಳ್ಳಿಯವರಕವಿತೆ-ಹೇಳದ ಮಾತು

Leave a Reply

Back To Top