ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಅಜ್ಜನೆಂಬ ಒಲವಿನ ಆಲದಮರ ನೆರಳು…

 ಮರದ ಬೇರು ಗಟ್ಟಿಯಿದ್ದರೇ ತಾನೇ ಮರ ಫಲ ಕೊಡಲು ಸಾಧ್ಯ..

ಹೌದು ಈ ಮಾತು ನಿಜವಾಗಿಯೂ ಸತ್ಯವಾಗಿದೆ. ಆಲದ ಮರದಂತಹ ವಿಶಾಲವಾದ ಕುಟುಂಬವು ಚೆನ್ನಾಗಿರಬೇಕೆಂದರೇ ಕುಟುಂಬದ ಹಿರಿಯರು ಸಂತೋಷದಿಂದ ಇರಬೇಕು. ನಮ್ಮ ಪ್ರತಿ ಏಳ್ಗೆಯಲ್ಲಿಯೂ ಹಿರಿಯರ ಬೆವರಿನ ದಟ್ಟವಾದ ಸುವಾಸನೆ ಹರಡಿರುತ್ತದೆ. ಅವರಿಲ್ಲದೆ ನಾವಿಲ್ಲ. ಅವರ ಆಸರೆಯಲ್ಲಿ ಬೆಳೆದ ನಾವುಗಳು ಅವರಿಗೆ ಸದಾ ಋಣಿಯಾಗಿರಬೇಕು. ಅಂತಹ ಋಣವನ್ನು ತೀರಿಸಲಾರದ ಪ್ರೀತಿ ತೋರಿಸುವ ಸಂಬಂಧವೇ ಅಜ್ಜ..!!

ಅಜ್ಜ ಆಲದ ಮರದಂತೆ ನೆರಳು ಕೊಡುತ್ತಲೇ , ಮಾವಿನ ಮರದಂತೆ ಹಣ್ಣು ಕೊಡುವ ಜೀವವದು.  ಬಾಲ್ಯದಲ್ಲಿ ಶಾಲೆಗೆ ಕಳುಹಿಸುವದರಿಂದ ಹಿಡಿದು…

ಮಮ್ಮೊಗನ ಓದು, ನೌಕರಿ,  ಮದುವೆ, ಎಲ್ಲದರಲ್ಲೂ ತಂದೆಯಂತೆ ಅಜ್ಜ‌ನ ಶ್ರಮವನ್ನು ಮರೆಯುವಂತಿಲ್ಲ.

ಕಾಲ ಗತಿಸಿದಂತೆ…

 ಅಂತಹ ಪ್ರೀತಿಯ ಒರತೆಯ ಅಜ್ಜ ಯಾವುದಾದರೂ ಕಾಯಿಲೆಗೆ ತುತ್ತಾದರೇ..??

ನಾವು ಹೇಗೆ ನಡೆದುಕೊಳ್ಳುವುವೆವು ಎನ್ನುವುದನ್ನು ಅರ್ಥೈಸಿಕೊಳ್ಳಬೇಕು.

ಕೂಸುಮರಿಯಾಗಿ, ಆನೆಮರಿಯಾಗಿ ನಮ್ಮನ್ನು ಎತ್ತಿ ಆಡಿಸಿದ ಹಿರಿಯ ಜೀವವದು. ಯಾರಿಗೂ ಗೊತ್ತಾಗದಂತೆ ನಮಗೆ ತಿನ್ನಲು ಸದಾ ಏನನ್ನಾದರೂ ತಂದು ಕೊಟ್ಟ ಮಮತೆಯ ಮೂರ್ತಿ..!! ಊರಿಗೆ ಹೋದರೆ ತನ್ನೊಂದಿಗೆ ಹೆಗಲ ಮೇಲೆ ಕೂಡಿಸಿಕೊಂಡು ಕರೆದೊಯ್ಯತಿದ್ದನ್ನು ಮರೆಯಲು ಸಾಧ್ಯವೇ..?

ನಮಗೆ ಕಾಯಿಲೆಯಾದಾಗ ಆಸ್ಪತ್ರೆಯಲ್ಲಿ ಆರೈಕೆ ಮಾಡುವ, ಗಾಯವಾದಾಗ ನೋವು ಅನುಭವಿಸುವ ಜೀವವದು.

ಅಂತಹ ಜೀವಕ್ಕೆ…ಈಗ ಕಾಯಿಲೆಯಾದರೇ ದೂರ ಸರಿಯುವದು ಸೂಕ್ತವೇ..?!

ನಮ್ಮನ್ನು ಬಾಲ್ಯದಿಂದಲೂ ನೋಡಿಕೊಂಡ ಅವರ ಒಲವಿಗೆ ಕೊನೆಯುಂಟೆ..??

ಮಗನ ಅಥವಾ ಮಗಳ ಪ್ರತಿ ಸಂತೋಷವನ್ನು ಬಯಸಿದಂತೆ ಮಮ್ಮೊಗನ ಅಥವಾ ಮಮ್ಮೊಗಳ ಸಂತೋಷವನ್ನು ಬಯಸುತ್ತದೆ ಅಜ್ಜನೆಂಬ ವಿಶಾಲವಾದ ಆಲದ ಮರ..!!

ಆಸ್ತಿ ಸರಿಯಾಗಿ ಹಂಚಿಲ್ಲವೆಂಬ ಮಗನ/ಮಗಳ ಮಾತಿಗೆ ಚಿಂತಿಸದೆ ಅವರಿಗೆ ಸಾಲವಾಗಬಾರದೆಂದು ಹಗಲಿರುಳು ಬೆವರು ಸುರಿಸಿ ದುಡಿದು ಹಣ್ಣಾದ ಜೀವವದು. ಮುಪ್ಪಿನಲ್ಲಿ ಯಾರಿಗೂ ಹೊರೆಯಾಗಬಾರದೆಂದು ತನ್ನ ಸಂಕಟವನ್ನು ಎದೆಯೊಳಗಿಟ್ಟು ಮುಗುಳ್ನಗೆ ಬಿರುತ್ತಲೇ, ಸೊಸೆಯ ಕೊಂಕು ಮಾತಿಗೆ ಬೆಲೆ ನೀಡದೆ ಮಮ್ಮೊಕ್ಕಳ ಆರೈಕೆ,ಪ್ರೀತಿಯಲ್ಲಿ ಜೀವ ತೇಯುತಿದೆ..!!

ತನಗಾದ ನೋವನ್ನು ಅವಡಗಚ್ಚಿ, ಕಣ್ಣೀರು ಸುರಿಸುತ್ತ “ತನ್ನವಳು ನಡು ನೀರಿನಲ್ಲಿ ಕೈಬಿಟ್ಟು ಹೋದಳಲ್ಲ..” ಎಂದು ಕೊರಗುತ್ತಾ ಕಾಲ ದುಡೂತ್ತದೆ ಹಿರಿಯ ಜೀವ.

ಕೆಲವು ಸಲ, ಕೆಲವು ಕುಟುಂಬಗಳಲ್ಲಿ ಹೀಗೂ ಆಗಿಬಿಡುತ್ತದೆ…

ಕಾಯಿಲೆಯಿಂದ ನರಳುತ್ತಿದ್ದ ಅಜ್ಜನ ಹತ್ತಿರ ಮಗ ಸೊಸೆ ಹೋಗುವುದಿರಲಿ, ಮಮ್ಮೊಕ್ಕಳನ್ನು ಆತನ ಹತ್ತಿರ ಬಿಡುವುದಿಲ್ಲ. ಆಗ ಆ ಜೀವ ಎಷ್ಟು ಕೊರಗಿರಬಾರದು…!!  ಅಂತಹ ಸಂದರ್ಭ ಯಾರಿಗೂ ಬಾರದಿರಲಿ. ಹಿರಿಯರಿಲ್ಲದೆ ನಾವಿಲ್ಲ ಎಂಬ ಕನಿಷ್ಟ ತಿಳುವಳಿಕೆ ನಮ್ಮೊಳಗೆ ಮೂಡಲಿ.

ಅಜ್ಜನನ್ನು ಮೊಮ್ಮಕ್ಕಳು ಪ್ರೀತಿಯಿಂದಲೇ ತಾತಾ, ಅಜ್ಜ, ಮುತ್ತ್ಯಾ..ಮುಂತಾಗಿ ಕರೆದು ತಮ್ಮ ತುಂಟಾಟ,ತೊದಲ್ನುಡಿ ಆಟ ರಂಪಾಟವಾಡುತ್ತವೆ ಮಕ್ಕಳು..!!

ಅಜ್ಜನೆಂದರೆ ಹಾಗೇ…

ಆಲದ ಮರದಂತೆ. ನಾವು ಯಾವತ್ತೂ ಬೇರನ್ನು ಮರೆಯಬಾರದು. ಅಜ್ಜನ ಒಲವನ್ನು ಕುಟುಂಬದ ಸದಸ್ಯರೆಲ್ಲರೂ ಪಡೆದಿರುತ್ತೇವೆ. ಅವರ ಒಲವಧಾರೆಯಲ್ಲಿ ಮಿಂದವರು ನಾವುಗಳು ಅವರನ್ನು ಮುಪ್ಪಿನಲ್ಲಿ ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಭಾವಿಸೋಣ..


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ

One thought on “

Leave a Reply

Back To Top