ಜಯಶ್ರೀ ಭ ಭಂಡಾರಿ-ಗಜಲ್

ಕಾವ್ಯ ಸಂಗಾತಿ

ಜಯಶ್ರೀ ಭ ಭಂಡಾರಿ-ಗಜಲ್

ಶಿಕ್ಷಕರು ಮಕ್ಕಳಿಗ ಬುದ್ಧಿ ಹೇಳುತ ಪಾಠ ಮಾಡುವುದು ಕರ್ತವ್ಯ.
ದಕ್ಷತೆಯಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡದಿರೆ ಕಾಡುವುದು ಕರ್ತವ್ಯ

ದಿನನಿತ್ಯದ ಕೆಲಸದಲ್ಲಿ ಚ್ಯುತಿ ಬಂದರೆ ಮೆಚ್ಚುವನೆ ಪರಮಾತ್ಮ.
ದನಗಳೆಂದು ತಾತ್ಸಾರ ಭಾವನೆ ತಾಳದೆ ನೋಡುವುದು ಕರ್ತವ್ಯ

ಹೆತ್ತವರನು ಕಡೆಗಣಿಸಿ ವೃದ್ಧಾಶ್ರಮಕ್ಕೆ ತಳ್ಳುವುದು ತರವಲ್ಲ ಕೇಳು
ಹೊತ್ತ ಧರಣಿಯ ಋಣದ ಭಾರ ತೀರಿಸದೆ ನಡೆದರೆ ತೋಡುವುದು ಕರ್ತವ್ಯ

ಮೂರು ವರ್ಷದ ಬುದ್ದಿ ನೂರು ವರುಷ  ಜಗದ ಮಾತು  ನೆನಪಿರಲಿ 
ದೂರು ಹೇಳುತ ಮನದಿ ಕುದಿಯುತ ಕುಂತರೆ ಬಾಡುವುದು ಕರ್ತವ್ಯ.

ಭವಿಷ್ಯದ ಕನಸುಗಳನು ಸಾಕಾರಗೊಳಿಸುವ ಕಲೆ ಜಯ ಅರಿತಿಹಳು
ಆಯುಷ್ಯವೆಲ್ಲಾ ತನ್ನವರ ಹಂಬಲದಿ ಕಳೆದರೆ ದೂಡುವುದು  ಕರ್ತವ್ಯ.


Leave a Reply

Back To Top