ಹನಿಬಿಂದು-ದಶಕ

ಕಾವ್ಯ ಸಂಗಾತಿ

ದಶಕ

ಹನಿಬಿಂದು

.

ಯುವಕರ ಎದೆಯನು ತಟ್ಟಿದ ಯುವಕನ
ಯುವಕರ ದಿನದಿ ನೆನೆಯುತ ಸಾಗುವ
ವಿವೇಕ ಜ್ಞಾನವ ಪಡೆದ ಯೋಗಿಯನು
ಆನಂದ ಮಾರ್ಗದಿ ಓದುತ ಓಡುವ..

ಭರತ ಖಂಡದ ಕೀರ್ತಿಯ ಮೆರೆದ
ಅಮೆರಿಕ ನೆಲದಲಿ ಕರತಾಡನ ಗಳಿಸಿದ
ಸಣ್ಣ ವಯಸ್ಸಿನಲಿ ದೊಡ್ಡ ಸಾಧನೆ
ಬಿಟ್ಟು ಸಂಸಾರದ ಎಲ್ಲಾ ಕಾಮನೆ!

ವಿವೇಕನನು ನೆನೆಯುತ ಸಾಗುವ
ಭರತ ಮಾತೆಯ ಕಂದನ ನೆನೆಯುವ
———————–

Leave a Reply

Back To Top