ಪ್ರೊ ರಾಜನಂದಾ ಘಾರ್ಗಿ-ಗಜಲ್

ಕಾವ್ಯಸಂಗಾತಿ

ಗಜಲ್

ಪ್ರೊ ರಾಜನಂದಾ ಘಾರ್ಗಿ

ಕಣ್ಣ ರೆಪ್ಪೆಯ ಅಹವಾಲು ಕೇಳಿಸದೇ ನಿನಗೆ
ನನ್ನ ಪ್ರೀತಿಯ ಕಮಾಲು ಕಾಣಿಸದೇ ನಿನಗೆ

ಒಡೆದ ಹೃದಯದ ರಕ್ತ ತೊಯಿಸಿದೆ ನಿನ್ನ ದಾರಿ
ಕಾಡಿಸುವ ಮನದ ತೃಷೆಯು ತಣಿಯದೇ ನಿನಗೆ

ಶತ ಶತಮಾನಗಳಿಂದ ಕಾದಿರುವೆ ನಿನಗಾಗಿ
ಕಣ್ಣಿರ ಕಾಲುವೆ ನೋಡಿ ಮನ ಕರಗದೇ ನಿನಗೆ

ಆತ್ಮ ಸಾಂಗತ್ಯದ ಕನಸು ಕರಗಿ ಹರಿಯುತಿದೆ
ನಾ ಹಾಡುತಿರುವ ವಿರಹ ಗೀತೆ ರುಚಿಸದೇ ನಿನಗೆ

ಉರುಳುತಿವೆ ಹಗಲು ತೆವಳುತಿವೆ ಇರುಳು
ರಾಜಿಯ ಮುಕ್ತ ಆರಾಧನೆ ಸಾಕಾಗದೇ ನಿನ

—————————

Leave a Reply

Back To Top