ಕಾವ್ಯ ಸಂಗಾತಿ
ಗಜಲ್
ಹಮೀದಾ ಬೇಗಂ ದೇಸಾಯಿ
ತಿಂಗಳಿರುಳ ಹಾಲಲಿ ಮಿಂದಿಹಳು ವಸುಧೆ ಆನಂದದಿ
ತಾರೆಗಳ ಬೆಳಕಲಿ ಮಿಂಚಿಹಳು ವಸುಧೆ ಆನಂದದಿ
ಕೃಷ್ಣ ದುಕೂಲ ನವುರಾಗಿ ಸುತ್ತಿದೆ ಅಲ್ಲವೇ
ರಾತ್ರಿರಾಣಿಯ ಘಮಲು ಹೊದ್ದಿಹಳು ವಸುಧೆ ಆನಂದದಿ
ತಂಬೆಲರು ಬೀಸುತಿದೆ ಸುಳಿದು ಮೆಲ್ಲಗೆ ನಗುತ
ಹೊನ್ನಿಗಳ ಪೈಜಣ ಹಾಕಿಹಳು ವಸುಧೆ ಆನಂದದಿ
ಚಂದ್ರಿಕೆಯ ಜೊನ್ನ ಸುರಿದಿದೆ ತರುಗಿರಿಗಳ ಮೇಲೆ
ಬಿರಿದ ಹೂಗೊಂಚಲು ಮುಡಿದಿಹಳು ವಸುಧೆ ಆನಂದದಿ
ಗಗನ ಗಂಭೀರ ವದನದಿ ನಿರುಕಿಸುತಿಹ ಬೇಗಂ
ಮಧುರ ಮಿಲನಕೆ ಕಾದಿಹಳು ವಸುಧೆ ಆನಂ