ಕಾವ್ಯ ಸಂಗಾತಿ
ಅಂತರಂಗದ ಸಂಘರ್ಷ
ಸವಿತಾ ಮುದ್ಗಲ್
ಭಾವನೆಯ ಒಡಲಿದು ನಮ್ಮದು
ಹೆಣ್ಣಿನ ಅಂತರಂಗವಿದು ತಿಳಿಯದು
ನಿತ್ಯದ ಬಾಳಿನ ಸಂಘರ್ಷವಿದು
ಮುಗಿಯದ ಸವಾಲಿನ ಹೋರಾಟವಿದು ||
ನಿತ್ಯಜೀವನದ ಸತ್ಯವು ಹುದುಗೋಗಿದೆ
ಅಸತ್ಯವಿಂದು ಅಹಂಕಾರದಲಿ ಮೆರೆದಾಡಿದೆ
ಮಹತ್ವಾಕಾಂಕ್ಷೆ ಹೊತ್ತು ತಿರುಗಾಡುತಿದೆ
ಮರೆಯಲಿ ಕುಳಿತು ಮುಸುನಗುತ್ತಿದೆ ||
ಹೆಚ್ಚುತ್ತಿದೆ ಭರವಸೆಗಳಿಗೆ ಆಶ್ವಾಸನೆಯು
ಕೆಸರಾಗುತ್ತಿದೆ ನಿಜವಾದ ಮನುಷ್ಯತ್ವವು
ಕಾಣದ ಸುವಾಸನೆ ಹಿಡಿಯುವ ಹಂಬಲವು
ಆಶ್ವಾದಿಸಿ ಕೂರದ ಮನದ ತೊಳಲಾಟಾವು ||
ಕತ್ತಲಿನ ಪ್ರದೇಶ ಬೆಳಕು ಕಾಣುವುದೋ
ಇರುಳಿಗೆ ಚಂದ್ರಮನ ಬೆಳದಿಂಗಳೋ
ಮನದ ಮೌಢ್ಯತೆಗೆ ಅರಿವಿನ ಬೆಳಕೋ
ಜೀವನದ ದಾರಿಗೆ ಜ್ಞಾನದ ಬೆಳಕಿದೆಯೋ |
ನಮ್ಮಂತವರ ಸಣ್ಣ ಬರಹಗಾರರ ಕವನ, ಲೇಖನ ಪ್ರಕಟಿಸಿ ಉತ್ತೇಜನ ನೀಡುವ ನಿಮ್ಮ ಕೈಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ಸರ್